Telegram Join My Telegram WhatsApp Join My WhatsApp

ಸ್ವಿಚ್‌ ವರ್ಡ್ಸ್‌ ಟ್ರೆಂಡ್‌ ನಿಜಾನಾ?

ಸ್ವಿಚ್‌ ವರ್ಡ್ಸ್‌ ಟ್ರೆಂಡ್‌ ನಿಜಾನಾ?ಸ್ವಿಚ್‌ವರ್ಡ್ಸ್ ಹುಟ್ಟಿದ್ದು ಹೇಗೆ?

ಈ ಪರಿಕಲ್ಪನೆಯನ್ನು ಅಮೆರಿಕದ ಲೇಖಕ ಮತ್ತು ಮನಶಾಸ್ತ್ರಜ್ಞ ಜೇಮ್ಸ್ ಟಿ. ಮ್ಯಾಂಗನ್ 1963ರಲ್ಲಿ ತಮ್ಮ ಪುಸ್ತಕ “The Secret of Perfect Living” ನಲ್ಲಿ ಪರಿಚಯಿಸಿದರು.

ಅವರ ಪ್ರಕಾರ, ಕೆಲವು ಪದಗಳು ನೇರವಾಗಿ ಒಳಮನಸ್ಸಿನ ಬಾಗಿಲನ್ನ ತೆರೆಯಬಲ್ಲವು. ಈ ಪದಗಳನ್ನು ಪದೇ ಪದೇ ಉಚ್ಚರಿಸಿದಾಗ ನಮ್ಮ ಮನಸ್ಸು ಸ್ವಯಂಚಾಲಿತವಾಗಿ ಬದಲಾಗುತ್ತದೆ ಎಂದು ಅವರು ನಂಬಿದ್ದರು.

ಸ್ವಿಚ್‌ವರ್ಡ್ಸ್ ನಂಬ್ತಿರಾ?

ಒಂದು ಪದ ಹೇಳಿದರೆ ಮನಸ್ಸು ಶಾಂತವಾಗುತ್ತದೆ ಅನ್ನೋದು ನಿಜಾನಾ? ಇತ್ತೀಚಿನ ದಿನಗಳಲ್ಲಿ ಸ್ವಿಚ್‌ವರ್ಡ್ಸ್ (Switchwords) ಎಂಬ ಪರಿಕಲ್ಪನೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಹಣ, ಪ್ರೀತಿ, ಯಶಸ್ಸು ಮತ್ತು ಆರೋಗ್ಯ ಪಡೆಯಲು ಕೆಲವು ವಿಶೇಷ ಪದಗಳನ್ನು ಜಪಿಸಬೇಕು ಎಂದು ನಂಬಲಾಗುತ್ತದೆ.

ಆದರೆ ಇದರ ಹಿಂದಿನ ನಿಜ ಏನು? ಇದು ವೈಜ್ಞಾನಿಕವೇ ಅಥವಾ ಕೇವಲ ನಂಬಿಕೆಯೇ? ಈ ಸ್ವಿಚ್‌ವರ್ಡ್ಸ್ ಎಂದರೇನು, ಅವು ಹೇಗೆ ಕೆಲಸ ಮಾಡುತ್ತವೆ, ಯಾರು ಬಳಸಬಹುದು ಮತ್ತು ನಿಜವಾಗಿಯೂ ಪ್ರಯೋಜನವಿದೆಯೇ ಅನ್ನೋದನ್ನ ತಿಳಿಯೋಣ.

ಸ್ವಿಚ್‌ವರ್ಡ್ಸ್ ಎಂದರೇನು?

ಸ್ವಿಚ್‌ವರ್ಡ್ಸ್ ಎಂದರೆ ಮನಸ್ಸಿನ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ “ಸ್ವಿಚ್” ಮಾಡಲು ಬಳಸಲಾಗುವ ವಿಶೇಷ ಪದಗಳು. ಇವು ಸಾಮಾನ್ಯವಾಗಿ ಇಂಗ್ಲಿಷ್ ಪದಗಳಾಗಿದ್ದು, ಒಳಮನಸ್ಸಿನ ಮೇಲೆ ನೇರ ಪ್ರಭಾವ ಬೀರುತ್ತವೆ ಅಂತ ಹೇಳುತ್ತಾರೆ.

ಉದಾಹರಣೆಗೆ, ನೀವು ಆತಂಕದಲ್ಲಿದ್ದಾಗ “CANCEL” ಎಂದು ಮನಸ್ಸಿನಲ್ಲಿ ಹೇಳಿಕೊಂಡರೆ ನಕಾರಾತ್ಮಕ ಆಲೋಚನೆ ನಿಲ್ಲುತ್ತದೆ ಎಂದು ನಂಬಲಾಗುತ್ತದೆ. ಇದು ಒಂದು ಮಾನಸಿಕ ಅಭ್ಯಾಸ ಪದ್ಧತಿ.

ಜನಪ್ರಿಯ ಸ್ವಿಚ್‌ವರ್ಡ್ಸ್ ಮತ್ತು ಅವುಗಳ ಉದ್ದೇಶ

ಪ್ರತಿಯೊಂದು ಸ್ವಿಚ್‌ವರ್ಡ್ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ:

  • TOGETHER – ಒಳಮನಸ್ಸಿನ ಎಲ್ಲ ಶಕ್ತಿಗಳನ್ನು ಒಂದುಗೂಡಿಸಲು; ಇದು “ಮಾಸ್ಟರ್ ಸ್ವಿಚ್‌ವರ್ಡ್” ಎಂದು ಕರೆಯಲಾಗುತ್ತದೆ
  • COUNT – ಹಣ ಮತ್ತು ಆರ್ಥಿಕ ಸಮೃದ್ಧಿ ಆಕರ್ಷಿಸಲು
  • DIVINE – ಅದ್ಭುತ ಫಲಿತಾಂಶ ಮತ್ತು ದಕ್ಷತೆ ಹೆಚ್ಚಿಸಲು
  • FIND – ಕಳೆದುಹೋದ ವಸ್ತು ಅಥವಾ ಅವಕಾಶ ಮರಳಿ ಪಡೆಯಲು
  • GOLDEN SUNRISE – ಮಾನಸಿಕ ಉದ್ವೇಗ, ಆಘಾತ ಮತ್ತು ಜಾಣ್ಮೆಯ ಕೊರತೆ ನಿವಾರಿಸಲು
  • CANCEL – ನಕಾರಾತ್ಮಕ ಆಲೋಚನೆ ಅಥವಾ ಋಣಾತ್ಮಕ ಸ್ಥಿತಿ ಅಳಿಸಲು
  • LOVE – ಸಂಬಂಧ ಮತ್ತು ಭಾವನಾತ್ಮಕ ಸಂಪರ್ಕ ಸುಧಾರಿಸಲು
  • ADJUST – ಬದಲಾವಣೆಗೆ ಒಗ್ಗಿಕೊಳ್ಳಲು

ಸ್ವಿಚ್‌ವರ್ಡ್ಸ್ ಹೇಗೆ ಕೆಲಸ ಮಾಡುತ್ತವೆ ಎಂದು ಹೇಳಲಾಗುತ್ತದೆ?

ಸ್ವಿಚ್‌ವರ್ಡ್ಸ್ ಬಳಸುವವರ ಪ್ರಕಾರ, ಈ ಪದಗಳು ಒಳಮನಸ್ಸಿನ “ಕೋಡ್” ಆಗಿ ಕಾರ್ಯ ನಿರ್ವಹಿಸುತ್ತೆ.

ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದಾಗ

ಈ ಪದಗಳನ್ನು ಉಚ್ಚರಿಸಿದಾಗ ನಮ್ಮ ಮನಸ್ಸಿನ vibration ಬದಲಾಗುತ್ತದೆ ಎಂದು ನಂಬಲಾಗುತ್ತದೆ. ಇದು ನಮ್ಮ ಸುತ್ತಲಿನ ಶಕ್ತಿಯ ಮೇಲೆ ಪ್ರಭಾವ ಬೀರಿ ಅನುಕೂಲಕರ ಸಂದರ್ಭಗಳನ್ನು ಸೃಷ್ಟಿಸುತ್ತದೆ ಎಂದು ಪ್ರತಿಪಾದಿಸಲಾಗುತ್ತದೆ.

ಮನಶಾಸ್ತ್ರೀಯ ದೃಷ್ಟಿಕೋನ

ಮನಶಾಸ್ತ್ರಜ್ಞರ ದೃಷ್ಟಿಯಿಂದ ನೋಡಿದರೆ, ಸ್ವಿಚ್‌ವರ್ಡ್ಸ್ ಒಂದು ರೀತಿಯ ಧನಾತ್ಮಕ ದೃಢೀಕರಣ (Positive Affirmation) ಇದ್ದಂತೆ. ನಾವು ಒಂದು ಪದ ಪದೇ ಪದೇ ಹೇಳಿಕೊಂಡಾಗ ಮೆದುಳು ಅದಕ್ಕೆ ಅನುಗುಣವಾದ ಆಲೋಚನಾ ಮಾದರಿ ಅನುಸರಿಸುತ್ತದೆ.

ಇದು NLP (Neuro-Linguistic Programming) ತಂತ್ರದಂತೆಯೂ ಕೆಲಸ ಮಾಡುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ವೈಜ್ಞಾನಿಕ ಸತ್ಯ ಏನು?

ಇಲ್ಲಿ ಸ್ಪಷ್ಟವಾಗಿ ತಿಳಿಸಬೇಕಾದ ಅಂಶ ಒಂದಿದೆ:

ಸ್ವಿಚ್‌ವರ್ಡ್ಸ್‌ಗಳು ಬಾಹ್ಯ ವಾಸ್ತವತೆಯನ್ನು ಬದಲಿಸುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ.

ಆದರೆ, ಧನಾತ್ಮಕ ಪದಗಳ ಪುನರಾವರ್ತನೆಯಿಂದ ಮನಸ್ಸು ಶಾಂತವಾಗಬಹುದು ಎಂಬ ಅಂಶವನ್ನು ಮನಶಾಸ್ತ್ರ ಒಪ್ಪಿಕೊಳ್ಳುತ್ತದೆ. ಇದನ್ನು Cognitive Behavioral Therapy (CBT) ಮತ್ತು Mindfulness ತಂತ್ರಗಳಲ್ಲಿ ಇದನ್ನ ಗುರುತಿಸಲಾಗಿದೆ.

ಹಾಗಾಗಿ ಸ್ವಿಚ್‌ವರ್ಡ್ಸ್ ಒಂದು ವೈಯಕ್ತಿಕವಾಗಿ ನಮಗೆ ನಾವೇ ಕೊಟ್ಟು ಕೊಳ್ಳುವ ಆದೇಶಗಳು  ಅಂತ ಹೇಳಬಹುದು – ಅದು ಮಾಯಾ ಮಂತ್ರವಲ್ಲ.

ಸ್ವಿಚ್‌ವರ್ಡ್ಸ್ ಬಳಸುವ ವಿಧಾನ

ಸ್ವಿಚ್‌ವರ್ಡ್ಸ್ ಬಳಸಲು ಯಾವುದೇ ಅಧಿಕೃತ ನಿಯಮ ಇಲ್ಲ. ಆದರೆ ಸಾಮಾನ್ಯವಾಗಿ ಈ ರೀತಿ ಬಳಸಲಾಗುತ್ತದೆ:

  1. ಮಂತ್ರದಂತೆ ಪಠಿಸುವುದು ನಕಾರಾತ್ಮಕ ಯೋಚನೆ ಬಂದಾಗ ನಿಮ್ಮ ಮನಸ್ಸಿನಲ್ಲಿ ಅಥವಾ ಧ್ವನಿ ಎತ್ತಿ ಆ ಪದ ಪುನರಾವರ್ತಿಸಿ.
  2. ಬರೆಯುವುದು ಡೈರಿ, ಕಾಗದ ಅಥವಾ ನೀರಿನ ಬಾಟಲ್ ಮೇಲೆ ಪದ ಬರೆದಿಡುವ ಅಭ್ಯಾಸ ಕೆಲವರಲ್ಲಿ ಕಾಣಬಹುದು.
  3. ಸಂಯೋಜನೆ ಬಳಸುವುದು ಒಂದಕ್ಕಿಂತ ಹೆಚ್ಚು ಪದ ಸೇರಿಸಿ ಬಳಸಬಹುದು.

ಉದಾಹರಣೆಗೆ:

  • ಹಣಕ್ಕಾಗಿ: TOGETHER-DIVINE-COUNT
  • ಶಾಂತಿಗಾಗಿ: CANCEL-GOLDEN SUNRISE
  • ಆತ್ಮವಿಶ್ವಾಸಕ್ಕಾಗಿ: TOGETHER-BE-DIVINE

ಯಾರು ಬಳಸಬಹುದು?

  • ಮಾನಸಿಕ ಒತ್ತಡ ಅನುಭವಿಸುತ್ತಿರುವವರು
  • ನಕಾರಾತ್ಮಕ ಆಲೋಚನೆ ತಡೆಯಲು ಬಯಸುವವರು
  • Meditation ಅಥವಾ Mindfulness ಅಭ್ಯಾಸ ಮಾಡುವವರು
  • ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಇಚ್ಛಿಸುವವರು

ಆದರೆ ತೀವ್ರ ಮಾನಸಿಕ ಸಮಸ್ಯೆಗಳಿಗೆ ಸ್ವಿಚ್‌ವರ್ಡ್ಸ್ ವೈದ್ಯಕೀಯ ಚಿಕಿತ್ಸೆಗೆ ಬದಲಿಯಾಗಲಾರವು. ಅಂತಹ ಸಂದರ್ಭದಲ್ಲಿ ತಜ್ಞ ಮನಶಾಸ್ತ್ರಜ್ಞರನ್ನು ಸಂಪರ್ಕಿಸಿ.

ಸ್ವಿಚ್‌ವರ್ಡ್ಸ್ ಬಳಸುವ ಮೊದಲು ಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ:

  • ಇದನ್ನು ಮಾನಸಿಕ ಶಾಂತಿಯ ಒಂದು ಸಹಾಯಕ ಸಾಧನ ಎಂದು ಮಾತ್ರ ಪರಿಗಣಿಸಿ
  • ಇದು ಧ್ಯಾನ, ವ್ಯಾಯಾಮ ಅಥವಾ ತಜ್ಞರ ಚಿಕಿತ್ಸೆಗೆ ಪರ್ಯಾಯ ಅಲ್ಲ
  • ಅತಿಯಾದ ನಿರೀಕ್ಷೆ ಇಡದೆ, ಪ್ರಯೋಗ ಮನೋಭಾವದಲ್ಲಿ ಬಳಸಿ
  • ವೈದ್ಯಕೀಯ ಸಮಸ್ಯೆಗಳಿಗೆ ಸ್ವಿಚ್‌ವರ್ಡ್ಸ್ ಮೊರೆ ಹೋಗಬೇಡಿ

 

ಸ್ವಿಚ್‌ವರ್ಡ್ಸ್ ಎಂಬುದು ಮಾಯಾ ಮಂತ್ರವೂ ಅಲ್ಲ, ಸುಳ್ಳೂ ಅಲ್ಲ. ಇದು ಒಂದು ಮಾನಸಿಕ ಅಭ್ಯಾಸ ಪದ್ಧತಿ. ಧ್ಯಾನ, ದೃಢೀಕರಣ ಅಥವಾ NLP ತಂತ್ರಗಳ ಜೊತೆ ಇದನ್ನು ಸಹಾಯಕ ಅಭ್ಯಾಸ ಎಂದು ಬಳಸಬಹುದು.

ನೀವು ಮಾನಸಿಕ ಶಾಂತಿ ಬಯಸುತ್ತಿದ್ದರೆ, ಸ್ವಿಚ್‌ವರ್ಡ್ಸ್ ಜೊತೆ ನಿಯಮಿತ ಧ್ಯಾನ, ಸಾಕಷ್ಟು ನಿದ್ದೆ ಮತ್ತು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ. ಇದು ದೀರ್ಘಕಾಲದ ಮಾನಸಿಕ ಆರೋಗ್ಯಕ್ಕೆ ಸಹಕಾರಿ.

ಸ್ವಿಚ್ ವರ್ಡ್ಸ್‌ ಬಗ್ಗೆ ಏನೂ ಗೊತ್ತೇ ಇಲ್ಲದೆಯೂ ನಮ್ಮ ಸುತ್ತಮುತ್ತಲೂ ಗಮನಿಸಿದಾಗ ಕಷ್ಟ ಕಷ್ಟ ಅನ್ನುವವರ ಲೈಪ್‌ ನೋಡಿ, ನಮ್ಮ ಮನೇಲಿ ಎಲ್ಲಾ ಚೆನ್ನಾಗಿದೀವಿ ಅಂತ ಅಂದುಕೊಳ್ಳುವವರ ಲೈಪ್‌ ನೋಡಿದ್ರೆ ಗೊತ್ತಾಗುತ್ತೆ. ಸ್ವಿಚ್‌ ವರ್ಡ್ಸ್‌ ಬಗ್ಗೆ ನಮ್ಮವರು ಒಳ್ಳೆಯ ಮಾತುಗಳನ್ನಾಡು ಅನ್ನೋದರ ಮೂಲಕ ಇದೇ ಪರಿಕಲ್ಪನೆಯನ್ನ ಹೇಳಿದ್ದರು. ಹಿತ್ತಲಗಿಡ ಮದ್ದಲ್ಲ ಅಂತ ಅದು ನಮಗೆ ಅರ್ಥ ಆಗಿಲ್ಲ. ಇರಲಿ ಭಾಷೆ ಯಾವುದಾದರೇನೂ, ಪರಿಕಲ್ಪನೆ ಯಾರದ್ದಾದರೇನೂ ಅದರ ಉದ್ದೇಶ ಒಂದೇ ಏಳ್ಗೆಗೆ ನಮ್ಮ ಮಾನಸಿಕ ಸ್ಥಿತಿ ಚೆನ್ನಾಗಿ ಇಟ್ಟುಕೊಳ್ಳೋಕೆ ನಿಯಮಿತವಾದ ಒಳ್ಳೆಯ ಅಭ್ಯಾಸಗಳನ್ನ, ರೂಢಿಗಳನ್ನ ಅನುಸರಿಸಬೇಕು ಅನ್ನೋದು. ನಿಮ್ಮ ಯಶಸ್ಸಿನ ಸ್ವಿಚ್‌ ವರ್ಡ್‌ ಯಾವ್ದು ಅಂತ ನೀವೇ ಡಿಸೈಡ್‌ ಮಾಡಿ. ಯಶಸ್ಸು ಖಂಡಿತ ನಿಮ್ಮದು!

ಯಾವ ಸ್ವಿಚ್‌ ವರ್ಡ್‌ ದಿನದಲ್ಲಿ ಹೆಚ್ಚೆಚ್ಚು ಬಳಸುತ್ತೀದ್ದೀರಿ ಅನ್ನೋದನ್ನ ಗಮನಿಸಿ. ಖುಷಿಯಾಗಿದ್ದೀನಿ ಅಂದುಕೊಳ್ತಾ ಇದ್ದರೆ ಖುಷಿಯೇ ದುಪ್ಪಟ್ಟಾಗೋದು. ನನ್ನ ಮಾತು ಯಾರು ಕೇಳ್ತಾನೇ ಇಲ್ಲ ಅನ್ನುವವರನ್ನ ನೋಡಿ ಅದನ್ನೇ ಮತ್ತೆ ಮತ್ತೆ ಹೇಳುತ್ತಾ ನಿಜವಾಗ್ಲೂ ಯಾರೂ ಅವರ ಮಾತು ಕೇಳೋದೇ ಇಲ್ಲ. ನನ್ನ ಮಾತು ಎಲ್ಲರೂ ಖುಷಿಯಿಂದ ಎಲ್ಲರೂ ಕೇಳುತ್ತಾರೆ ಅನ್ನುವವರನ್ನ ಗಮನಿಸಿ. ಅಲ್ಲಿಗೆ ಸ್ವಿಚ್‌ ವರ್ಡ್‌ ಏನೋ ತಂತ್ರ ಅಲ್ಲ ನಾವು ನಮ್ಮ ಸುತ್ತಲಿನ vibratiosಗಳನ್ನ ಮಾನಸಿಕವಾಗಿ ಹೇಗೆ creat ಮಾಡಿಕೊಳ್ತೀವಿ ಅನ್ನೋದು ಇಲ್ಲಿ ಮುಖ್ಯವಾಗಿರೋದು.

“ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ” ಅನ್ನೋ ಮಾತಿನ ಹಾಗೆ ಹೊಸದೇನನ್ನೇ ಕಲಿಯುವುದಾದರೂ ಗುರುವಿನ ಮಾರ್ಗದರ್ಶನದಲ್ಲಿ  ಕಲಿಯುವುದು ಉತ್ತಮ. ಅಲ್ಪ ಜ್ಞಾನ ಅನರ್ಥ ಉಂಟುಮಾಡಬಹುದು ಎಚ್ಚರಿಕೆಯಿಂದ ಹೆಜ್ಜೆ ಇಡಿ.

FAQs

ಪ್ರ 1: ಸ್ವಿಚ್‌ವರ್ಡ್ಸ್ ಎಂದರೇನು? ಉ: ಸ್ವಿಚ್‌ವರ್ಡ್ಸ್ ಎಂದರೆ ಒಳಮನಸ್ಸಿನ ಮೇಲೆ ಪ್ರಭಾವ ಬೀರಲು ಬಳಸಲಾಗುವ ವಿಶೇಷ ಪದಗಳು. ಇವು ಮಾನಸಿಕ ಸ್ಥಿತಿ ಬದಲಿಸಲು ನೆರವಾಗಬಹುದು ಎಂದು ನಂಬಲಾಗುತ್ತದೆ.

ಪ್ರ 2: ಸ್ವಿಚ್‌ವರ್ಡ್ಸ್ ವೈಜ್ಞಾನಿಕವಾಗಿ ಸಾಬೀತಾಗಿದೆಯೇ? ಉ: ಇಲ್ಲ. ಬಾಹ್ಯ ವಾಸ್ತವ ಬದಲಿಸುವ ಶಕ್ತಿ ಇದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆ ಇಲ್ಲ. ಆದರೆ ಧನಾತ್ಮಕ ಪದ ಪುನರಾವರ್ತನೆ ಮನಸ್ಸಿಗೆ ಶಾಂತಿ ನೀಡಬಹುದು.

ಪ್ರ 3: ಹಣಕ್ಕಾಗಿ ಯಾವ ಸ್ವಿಚ್‌ವರ್ಡ್ ಬಳಸಬೇಕು? ಉ: COUNT ಮತ್ತು TOGETHER-DIVINE-COUNT ಸಂಯೋಜನೆ ಹಣ ಆಕರ್ಷಣೆಗೆ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಕಠಿಣ ಶ್ರಮ ಮತ್ತು ಯೋಜನೆಗೆ ಬದಲಿಯಲ್ಲ.

ಪ್ರ 4: ಸ್ವಿಚ್‌ವರ್ಡ್ಸ್ ಕನ್ನಡದಲ್ಲಿ ಬಳಸಬಹುದೇ? ಉ: ಸ್ವಿಚ್‌ವರ್ಡ್ಸ್ ಮೂಲತಃ ಇಂಗ್ಲಿಷ್‌ನಲ್ಲಿ ಹುಟ್ಟಿಕೊಂಡಿವೆ. ಕನ್ನಡ ಅಥವಾ ಯಾವ ಭಾಷೆಯಲ್ಲಿ ಬಳಸಿದರೂ ಅದರ ಪರಿಣಾಮ ನಿಮ್ಮ ನಂಬಿಕೆ ಮತ್ತು ಉದ್ದೇಶದ ಮೇಲೆ ನಿಂತಿರುತ್ತದೆ.

ಇನ್ನೂ ಓದಿ : –https://kapublic.com/sakala-sanskruti-sanstheya-sansthapakiya-parichaya/

ಲಿಂಕ್‌ಗಳು :-http://amazon.in