Telegram Join My Telegram WhatsApp Join My WhatsApp

ಮುದ್ರಾ ಯೋಜನೆಯ ಲಾಭ ಪಡೆದುಕೊಳ್ಳಿ!20 ಲಕ್ಷ ಸಾಲದ ಮಿತಿ ಏರಿಕೆ!

 ಮುದ್ರಾ ಯೋಜನೆಯ ಲಾಭ ಪಡೆದುಕೊಳ್ಳಿ!20 ಲಕ್ಷ ಸಾಲದ ಮಿತಿ ಏರಿಕೆ!

ಮುದ್ರಾ ಯೋಜನೆ ಬಗ್ಗೆ ನಿಮ್ಗೆ ಯಾವುದೇ ಮಾಹಿತಿ ಈ ವರೆಗೆ ಸಿಕ್ಕಿಲ್ಲದೇ ಇದ್ದರೆ ಈಗ ಓದಿ. ದೇಶದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳ ಆರ್ಥಿಕ ಸಬಲತೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರೋ “ಪ್ರಧಾನ ಮಂತ್ರಿ ಮುದ್ರಾ ಯೋಜನೆ”ಯಲ್ಲಿ ಈಗ ಮುಖ್ಯವಾದ ಬದಲಾವಣೆ ಮಾಡಿದ್ದಾರೆ. ಈ ಮೊದಲು ಗರಿಷ್ಠ 10 ಲಕ್ಷ ರೂಪಾಯಿಗಳ ತನಕ ಮಾತ್ರ ಸಾಲ ಕೊಡುತ್ತಿದ್ದರು. ಈಗ ಸಾಲದ ಮಿತಿಯನ್ನು 20 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಿದ್ದಾರೆ. ವಿಶೇಷ ಏನೆಂದರೆ ಈ ಸಾಲ ತೆಗೆದುಕೊಳ್ಳೋದಕ್ಕೆ ಯಾವುದೇ ಆಸ್ತಿ ಅಥವಾ ಶೂನ್ಯ ಗ್ಯಾರಂಟಿಯ ಅವಶ್ಯಕತೆ ಇಲ್ಲದೇ ಇರೋದರಿಂದ ನಿರುದ್ಯೋಗಿಗಳು ಮತ್ತು ಸ್ವಂತ ಉದ್ಯೋಗ ಮಾಡ್ಬೇಕು ಅಂದುಕೊಂಡವರಿಗೆ ಲಾಭದಾಯಕವಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಹೊಸದಾಗಿ ಉದ್ಯಮವನ್ನ ಶುರು ಮಾಡ್ಬೇಕು ಅಂದುಕೊಂಡಿರುವವರು ಮತ್ತು ಈಗಾಗಲೇ ನಡೆಸುತ್ತಿರೋ ಸಣ್ಣ ವ್ಯವಹಾರಗಳನ್ನ ವಿಸ್ತರಣೆ ಮಾಡೋ ಯೋಚನೆಯಲ್ಲಿರುವವರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ಸಿಗುತ್ತೆ. ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಇರುವವರಿಗೆ ಈ ಯೋಜನೆಯ ಅಡಿಯಲ್ಲಿ ಮೊದಲ ಆದ್ಯತೆ.ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಈ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ದೇಶದ ಆರ್ಥಿಕ ಬೆಳವಣಿಗೆಗೆ ಮುದ್ರಾ ಯೋಜನೆ ಹೊಸ ಶಕ್ತಿಯಾಗುವ ನಿರೀಕ್ಷೆ ಇದೆ.

ಮುದ್ರಾ ಯೋಜನೆ ಎಂದರೇನು? ಈ ಯೋಜನೆಯಲ್ಲಿ ಯಾರೆಲ್ಲ ಸಾಲ ತೆಗೆದುಕೊಳ್ಳೋಕೆ ಸಾಧ್ಯ ಇದೆ? ಗ್ಯಾರಂಟಿಯಿಲ್ಲದೇ ಮುದ್ರಾ ಯೋಜನೆ ಅಡಿಯಲ್ಲಿ ಸಾಲವನ್ನು ಹೇಗೆ ಪಡೆದುಕೊಳ್ಳೋದು? ಅರ್ಜಿ ಸಲ್ಲಿಸೋದು ಹೇಗೆ? ಏನೆಲ್ಲಾ ಅರ್ಹತೆಗಳನ್ನು ಹೊಂದಿರುವವರಿಗೆ ಈ ಸಾಲ ಸಿಗುತ್ತೆ? ಎಲ್ಲ ಮಾಹಿತಿಗಳನ್ನು ವಿವರವಾಗಿ ತಿಳಿದುಕೊಳ್ಳಿ.

What Is Mudra Loan-ಏನಿದು ಮುದ್ರಾ ಯೋಜನೆ?

ಮುದ್ರಾ ಯೋಜನೆ ಎಂದರೆ MUDRA – Micro units development and refinance agency. ಈ ಯೋಜನೆ ಸಣ್ಣ ಕೈಗಾರಿಕೆಗಳಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಉದ್ದೇಶವನ್ನ ಹೊಂದಿದೆ. ಇದ್ರಲ್ಲಿ ಈ ಮೊದಲು ಶಿಶು,ಕಿಶೋರ್‌ ಮತ್ತು ತರುಣ್‌ ಅನ್ನೋ 3 ವಿಭಾಗಗಳಿದ್ದವು. ಈಗ “ತರುಣ್‌ ಪ್ಲಸ್‌” ಅನ್ನೋ ವಿಭಾಗವನ್ನ ಸೇರಿಸಿದ್ದಾರೆ. ಇದರಲ್ಲಿ ಸಾಲದ ಮಿತಿಯನ್ನು 20 ಲಕ್ಷಕ್ಕೆ ಏರಿಸಲಾಗಿದೆ.

What Businesses Can Get a Loan-ಯಾವೆಲ್ಲ ಉದ್ದಿಮೆಗೆ ಸಾಲ ಪಡೆಯಬಹುದು?

ಯಾವ ರೀತಿಯ ಉದ್ದಿಮೆಗಳಿಗೆ ಸಾಲ ಸಿಗುತ್ತೆ?

ಸಣ್ಣ ವ್ಯಾಪಾರಸ್ಥರು ಮತ್ತು ಅಂಗಡಿ ಮಾಲೀಕರು.

ಹಣ್ಣು ಮತ್ತು ತರಕಾರಿ ಮಾರಾಟಗಾರರು.

ಕೈಗಾರಿ ಉದ್ಯಮಗಳು (ಹಪ್ಪಳ, ಸಂಡಿಗೆ, ಗೃಹ ಕೈಗಾರಿಕೆ ಇತ್ಯಾದಿ).

ಸಾರಿಗೆ ಉದ್ದಿಮೆಗಳು (ಟ್ಯಾಕ್ಸಿ, ಆಟೋರಿಕ್ಷಾ ಖರೀದಿಸಲು).

ಸೇವಾ ವಲಯದ ಘಟಕಗಳು (ಬ್ಯೂಟಿ ಪಾರ್ಲರ್, ಜಿಮ್, ಟೈಲರಿಂಗ್ ಶಾಪ್ ಇತ್ಯಾದಿ).

ಗ್ಯಾರಂಟಿ ಇಲ್ಲದೇ ಸಾಲ ತೆಗೆದುಕೊಳ್ಳೋದು ಹೇಗೆ?.

ಮುದ್ರಾ ಯೋಜನೆಯ ವಿಶೇಷತೆ ಎಂದರೆ “ಕೊಲಾಟರಲ್ ಫ್ರೀ” ಸಾಲ. ಅಂದ್ರೆ, ನೀವು ಸಾಲ ಪಡಿಲಿಕ್ಕೆ ನಿಮ್ಮ ಜಮೀನು ಅಥವಾ ಮನೆ ಪತ್ರಗಳನ್ನ ಅಡ ಇಡ್ಬೇಕು ಅಂತಿಲ್ಲ. ʼಕ್ರೆಡಿಟ್‌ ಗ್ಯಾರಂಟಿ ಫಂಡ್‌ ಫಾರ್‌ ಮೈಕ್ರೋ ಯೂನಿಟ್ಸ್‌” ಅಡಿಯಲ್ಲಿ ಸರ್ಕಾರವೇ ನಿಮ್ಗೆ ಸಾಲಕ್ಕೆ ಗ್ಯಾರಂಟಿ ಕೊಡುತ್ತೆ. ನೀವು ವ್ಯವಹಾರದ ಬಗ್ಗೆ ಸರಿಯಾಗಿರೋ plan ವಿವರವನ್ನ ಕೊಡ್ಬೇಕು.

ಅರ್ಜಿ ಸಲ್ಲಿಸೋದು ಹೇಗೆ?

. ಮೊದಲು ನಿಮ್ಗೆ ಯಾವುದರ ಅಗತ್ಯ ಇದೆ ನಿರ್ಧಾರ ಮಾಡ್ಬೇಕು

  • ಹೊಸ ಉದ್ಯಮ ಶುರು ಮಾಡೋ plan ಲ್ಲಿ ಇದೀರಾ?
  • ಈಗಾಗಲೇ ಮಾಡ್ತಾ ಇರೋ ವ್ಯವಹಾರವನ್ನೇ ವಿಸ್ತರಿಸೋಕೆ ಸಾಲ ಬೇಕಾ?
  • ಎಷ್ಟು ಮೊತ್ತದ ಸಾಲ ಬೇಕು? ನಾಲ್ಕು ಹಂತಗಳಲ್ಲಿ ಯಾವುದನ್ನು ಆಯ್ಕೆ ಮಾಡ್ತೀರಿ? ಶಿಶು/ ಕಿಶೋರ್/‌ ತರುಣ್/‌ ತರುಣ್‌ ಪ್ಲಸ್

ನಿಮ್ಗೆ ಯಾವುದರ ಅವಶ್ಯಕತೆ ಇದೆ ಅದಕ್ಕೆ ತಕ್ಕ ವಿಭಾಗ ಆಯ್ಕೆ ಮಾಡ್ಕೊಬೇಕು.

ಬೇಕಾಗಿರೋ ದಾಖಲೆಗಳನ್ನ ಸಿದ್ಧಪಡಿಸಿ

ಅರ್ಜಿಗೆ ಸಾಮಾನ್ಯವಾಗಿ ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್

ಪ್ಯಾನ್ ಕಾರ್ಡ್

  • ವಿಳಾಸದ ಪುರಾವೆ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಬ್ಯಾಂಕ್ ಖಾತೆ ವಿವರಗಳು (ಹಳೆಯ 6 ತಿಂಗಳ ಸ್ಟೇಟ್ಮೆಂಟ್ ಇದ್ದರೆ ಉತ್ತಮ)
  • ವ್ಯವಹಾರ ಯೋಜನೆ (Project Report)
  • ವ್ಯವಹಾರ ನೋಂದಣಿ ದಾಖಲೆಗಳು (ಅಗತ್ಯವಿದ್ದರೆ)

ಗಮನಿಸಿ: ಸರಿಯಾದ ಪ್ರಾಜೆಕ್ಟ್ ರಿಪೋರ್ಟ್ ಇದ್ರೆ  ಸಾಲ ಮಂಜೂರಾಗೋ ಸಾಧ್ಯತೆ ಹೆಚ್ಚುತ್ತೆ

ಯಾವ ಸಂಸ್ಥೆಯಲ್ಲಿ ವ್ಯವಹಾರವನ್ನು ಮಾಡ್ತೀರಿ?

ಮುದ್ರಾ ಸಾಲವನ್ನು ಈ ಸಂಸ್ಥೆಗಳ ಮೂಲಕ ಪಡೆಯಬಹುದು:

  • ರಾಷ್ಟ್ರೀಕೃತ ಬ್ಯಾಂಕುಗಳು (ಉದಾ: State Bank of India, Canara Bank)
  • ಖಾಸಗಿ ಬ್ಯಾಂಕುಗಳು
  • ಸಹಕಾರ ಬ್ಯಾಂಕುಗಳು
  • NBFCಗಳು
  • ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFIs)

ನಿಮ್ಮ ಹತ್ತಿರ ಇರೋ ಬ್ಯಾಂಕ್‌ಗೆ ಭೇಟಿ ಕೊಡೋದು ಸುಲಭದ ಉಪಾಯ

ಅರ್ಜಿ ಫಾರ್ಮ್ ಭರ್ತಿ ಮಾಡುವುದು

  • ಬ್ಯಾಂಕ್‌ನಲ್ಲಿ “MUDRA Loan Application Form” ಕೇಳಿ ತೆಗೆದುಕೊಳ್ಳಿ.
  • ನಿಮ್ಮ ವೈಯಕ್ತಿಕ ಮಾಹಿತಿ, ವ್ಯವಹಾರದ ವಿವರಗಳು, ಸಾಲ ಮೊತ್ತ, ಆದಾಯ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಸೇರಿಸಿ ಸಲ್ಲಿಸಿ.

ಬ್ಯಾಂಕ್ ಪರಿಶೀಲನೆ ಪ್ರಕ್ರಿಯೆ ಹೇಗಿರುತ್ತೆ

ಬ್ಯಾಂಕ್ ಅಧಿಕಾರಿಗಳು:

  • ನಿಮ್ಮ ಕ್ರೆಡಿಟ್ ಹಿಸ್ಟರಿ ಪರಿಶೀಲಿಸುತ್ತಾರೆ
  • ವ್ಯವಹಾರ ಯೋಜನೆ ವಾಸ್ತವಿಕತೆಯನ್ನು ಪರಿಶೀಲಿಸುತ್ತಾರೆ
  • ಅಗತ್ಯವಿದ್ದರೆ ನಿಮ್ಮ ಸ್ಥಳಕ್ಕೆ ಭೇಟಿ ನೀಡಬಹುದು

ಎಲ್ಲವೂ ಸರಿಯಾಗಿದ್ದರೆ, ಸಾಲ ಮಂಜೂರು ಮಾಡಲಾಗುತ್ತದೆ.

ಸಾಲ ಮಂಜೂರು ಮತ್ತು ಹಣ ಜಮಾ

  • ಅನುಮೋದನೆ ನಂತರ, ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  • ಕೆಲ ಸಂದರ್ಭಗಳಲ್ಲಿ “MUDRA Card” ಕೊಡ್ತಾರೆ – ಇದನ್ನು ಡೆಬಿಟ್ ಕಾರ್ಡ್ ರೀತಿಯಲ್ಲಿ ಬಳಸಬಹುದು.

ಆನ್‌ಲೈನ್ ಅರ್ಜಿ (ಸೌಲಭ್ಯ ಇರುವಲ್ಲಿ)

ಕೆಲವು ಬ್ಯಾಂಕುಗಳು ತಮ್ಮ ಅಧಿಕೃತ ವೆಬ್‌ಸೈಟ್ ಮೂಲಕ ಮುದ್ರಾ ಸಾಲ ಅರ್ಜಿಯನ್ನು ಸ್ವೀಕರಿಸ್ತಾರೆ.

  • ಬ್ಯಾಂಕ್ ವೆಬ್‌ಸೈಟ್‌ಗೆ ಹೋಗಿ
  • “MSME / MUDRA Loan” ವಿಭಾಗ ಆಯ್ಕೆ ಮಾಡಿ
  • ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ
  • ದಾಖಲೆಗಳನ್ನು ಅಪ್ಲೋಡ್ ಮಾಡಿ

ಬ್ಯಾಂಕ್ ಪ್ರತಿನಿಧಿ ನಂತರ ನಿಮ್ಮನ್ನು ಸಂಪರ್ಕಿಸ್ತಾರೆ.

ಅರ್ಜಿ ಸಲ್ಲಿಸೋವಾಗ ಗಮನಿಸಬೇಕಾದ ವಿಷಯಗಳು

ಸಾಲವನ್ನು ಸ್ಪಷ್ಟ ಉದ್ದೇಶಕ್ಕಾಗಿ ಮಾತ್ರ ಕೇಳಿ
ಅತಿಯಾದ ಮೊತ್ತ ಕೇಳಬೇಡಿ – ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿ
EMIಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ
ತಪ್ಪು ಮಾಹಿತಿ ನೀಡಬೇಡಿ

ಎಷ್ಟು ದಿನಕ್ಕೆ ಈ ಕೆಲಸ ಆಗುತ್ತೆ?

ಸಾಮಾನ್ಯವಾಗಿ 7 ರಿಂದ 15 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಬಹುದು (ಬ್ಯಾಂಕ್ ಹಾಗೂ ದಾಖಲೆಗಳ ಮೇಲೆ ಅವಲಂಬಿತ).

ಮುದ್ರಾ ಯೋಜನೆಯಲ್ಲಿ ಸಾಲ ತೆಗೆದುಕೊಳ್ಳೋಕೆ ಇರುವ ಅರ್ಹತೆಗಳು

ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.

  • ಕನಿಷ್ಠ ವಯಸ್ಸು: 18 ವರ್ಷಗಳು ಪೂರ್ಣವಾಗಿರಬೇಕು
  • ಸಾಮಾನ್ಯವಾಗಿ ಗರಿಷ್ಠ ವಯಸ್ಸು: 65 ವರ್ಷಗಳ ಒಳಗೆ (ಬ್ಯಾಂಕ್ ನಿಯಮಾನುಸಾರ ಬದಲಾಗಬಹುದು)
  • ಯಾವುದೇ ಡಿಫಾಲ್ಟರ್ (loan defaulter) ಆಗಿರಬಾರದು
  • ಸಣ್ಣ ಉತ್ಪಾದನೆ, ವ್ಯಾಪಾರ ಅಥವಾ ಸೇವಾ ವಲಯದಲ್ಲಿ ತೊಡಗಿಸಿಕೊಂಡಿರಬೇಕು
  • ವ್ಯವಹಾರ ನೋಂದಣಿ ದಾಖಲೆಗಳು (ಅಗತ್ಯವಿದ್ದಲ್ಲಿ) ಇರಬೇಕು

ಕೇಂದ್ರ ಸರ್ಕಾರವು 2015ರಲ್ಲಿ ಆರಂಭಿಸಿದ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಮಟ್ಟದ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶ.

MUDRA (Micro Units Development and Refinance Agency) ಸಂಸ್ಥೆಯ ಮೂಲಕ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFIs) ಮತ್ತು NBFCಗಳ ಮೂಲಕ ಸಾಲವನ್ನು ವಿತರಿಸಲಾಗುತ್ತದೆ. ಇತ್ತೀಚಿನ ಬದಲಾವಣೆಯಂತೆ ಗರಿಷ್ಠ ಸಾಲ ಮಿತಿಯನ್ನು 20 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಲಾಗಿದೆ (ತರುಣ್ ಪ್ಲಸ್ ವಿಭಾಗ).

 ಸಾಲ ವಿಭಾಗಗಳು

ಮುದ್ರಾ ಯೋಜನೆ ಅಡಿಯಲ್ಲಿ ಸಾಲವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:

  • ಶಿಶು (Shishu) – ₹50,000 ವರೆಗೆ
  • ಕಿಶೋರ್ (Kishor) – ₹50,000 ರಿಂದ ₹5 ಲಕ್ಷ
  • ತರುಣ್ (Tarun) – ₹5 ಲಕ್ಷ ರಿಂದ ₹10 ಲಕ್ಷ
  • ತರುಣ್ ಪ್ಲಸ್ (Tarun Plus) – ₹10 ಲಕ್ಷ ರಿಂದ ₹20 ಲಕ್ಷ

ಹೊಸ ಉದ್ಯಮ ಆರಂಭಿಸುವವರಿಂದ ಹಿಡಿದು, ಈಗಾಗಲೇ ವ್ಯವಹಾರ ನಡೆಸುತ್ತಿರುವವರು ವಿಸ್ತರಣೆಗಾಗಿ ಈ ಸಾಲವನ್ನು ಪಡೆಯಬಹುದು.

 ಬಡ್ಡಿದರ ಮತ್ತು ಮರುಪಾವತಿ ಅವಧಿ

  • ಬಡ್ಡಿದರವು ಸಂಬಂಧಿಸಿದ ಬ್ಯಾಂಕ್/ಸಂಸ್ಥೆಯ ನೀತಿಗೆ ಅನುಗುಣವಾಗಿ ಬದಲಾಗುತ್ತದೆ.
  • ಸಾಮಾನ್ಯವಾಗಿ 8% ರಿಂದ 12% ರಷ್ಟು ಇರಬಹುದು.
  • ಮರುಪಾವತಿ ಅವಧಿ 3 ರಿಂದ 7 ವರ್ಷಗಳವರೆಗೆ ನೀಡಲಾಗುತ್ತದೆ.
  • ಕೆಲವು ಸಂದರ್ಭಗಳಲ್ಲಿ ಮೊರಾಟೋರಿಯಂ (Moratorium) ಅವಧಿಯೂ ದೊರೆಯಬಹುದು.

ಯೋಜನೆಯ ಲಾಭ

  • ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗ ಆರಂಭಿಸಲು ಅವಕಾಶ
  • ಮಹಿಳಾ ಉದ್ಯಮಿಗಳಿಗೆ ಉತ್ತೇಜನ
  • ಗ್ರಾಮೀಣ ಮತ್ತು ನಗರ ಸಣ್ಣ ವ್ಯವಹಾರಗಳಿಗೆ ಬೆಂಬಲ
  • ಆರ್ಥಿಕ ಸ್ವಾವಲಂಬನೆಗೆ ಸಹಾಯ

ಗಮನಿಸಬೇಕಾದ ವಿಚಾರಗಳು

  • ಸಾಲವನ್ನು ಸರಿಯಾದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು
  • EMIಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು
  • ಡಿಫಾಲ್ಟ್ ಮಾಡಿದರೆ ಭವಿಷ್ಯದ ಸಾಲ ಪಡೆಯಲು ಅಡಚಣೆ ಆಗಬಹುದು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಗ್ಯಾರಂಟಿಯಿಲ್ಲದೆ 20 ಲಕ್ಷವರೆಗೆ ಸಾಲ ಸೌಲಭ್ಯ ದೊರೆಯುವುದು ಹೊಸ ಉದ್ಯಮಿಗಳಿಗೆ ದೊಡ್ಡ ಅವಕಾಶವಾಗಿದೆ. ಸರಿಯಾದ ಯೋಜನೆ ಮತ್ತು ಹಣಕಾಸಿನ ಶಿಸ್ತು ಇದ್ದರೆ, ಈ ಯೋಜನೆಯ ಮೂಲಕ ಆರ್ಥಿಕವಾಗಿ ಬೆಳೆಯಲು ಉತ್ತಮ ಅವಕಾಶ ಸಿಗುತ್ತದೆ.

ಮಹಿಳಾ ಉದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ

ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಹಲವಾರು ಬ್ಯಾಂಕುಗಳು ಮಹಿಳಾ ಉದ್ಯಮಿಗಳಿಗೆ ಸ್ವಲ್ಪ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಸೌಲಭ್ಯ ಒದಗಿಸುತ್ತವೆ. ಸ್ವಸಹಾಯ ಗುಂಪುಗಳು (Self Help Groups – SHGs) ಹಾಗೂ ಗ್ರಾಮೀಣ ಮಹಿಳೆಯರು ಸಣ್ಣ ಕೈಗಾರಿಕೆ, ಹಸ್ತಶಿಲ್ಪ, ಆಹಾರ ಸಂಸ್ಕರಣೆ, ಟೈಲರಿಂಗ್ ಮುಂತಾದ ಕ್ಷೇತ್ರಗಳಲ್ಲಿ ಮುದ್ರಾ ಸಾಲದ ನೆರವಿನಿಂದ ಯಶಸ್ವಿಯಾಗಿ ಉದ್ಯಮ ಆರಂಭಿಸಿದ್ದಾರೆ. ಇದರಿಂದ ಕುಟುಂಬದ ಆದಾಯ ಹೆಚ್ಚುವುದರ ಜೊತೆಗೆ ಸಮಾಜದಲ್ಲಿ ಮಹಿಳೆಯರ ಆರ್ಥಿಕ ಸ್ಥಾನಮಾನವೂ ಬಲಪಡುತ್ತಿದೆ.

ಡಿಜಿಟಲ್ ಮತ್ತು ಸ್ಟಾರ್ಟ್‌ಅಪ್ ಉದ್ಯಮಗಳಿಗೆ ಅವಕಾಶ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್, ಆನ್‌ಲೈನ್ ವ್ಯಾಪಾರ, ಮೊಬೈಲ್ ರಿಪೇರಿ, ಕಂಪ್ಯೂಟರ್ ಸೇವೆಗಳು, ಯೂಟ್ಯೂಬ್ ಚಾನೆಲ್ ನಿರ್ವಹಣೆ ಮುಂತಾದ ಹೊಸ ತಲೆಮಾರಿನ ಉದ್ಯಮಗಳಿಗೂ ಮುದ್ರಾ ಸಾಲ ಲಭ್ಯವಿದೆ. ಯುವಕರು ತಮ್ಮ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಈ ಯೋಜನೆ ಉತ್ತಮ ವೇದಿಕೆಯಾಗಿದೆ. ಸರಿಯಾದ ಪ್ರಾಜೆಕ್ಟ್ ರಿಪೋರ್ಟ್ ಮತ್ತು ಆದಾಯ ನಿರೀಕ್ಷೆಗಳೊಂದಿಗೆ ಅರ್ಜಿ ಸಲ್ಲಿಸಿದರೆ, ಬ್ಯಾಂಕುಗಳಿಂದ ಅನುಮೋದನೆ ಪಡೆಯಲು ಸುಲಭವಾಗುತ್ತದೆ.

ಕ್ರೆಡಿಟ್ ಇತಿಹಾಸ ನಿರ್ಮಾಣಕ್ಕೆ ಸಹಾಯ

ಮುದ್ರಾ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ, ಉದ್ಯಮಿಯ ಕ್ರೆಡಿಟ್ ಸ್ಕೋರ್ ಉತ್ತಮವಾಗುತ್ತದೆ. ಭವಿಷ್ಯದಲ್ಲಿ ಹೆಚ್ಚಿನ ಮೊತ್ತದ ವ್ಯವಹಾರ ಸಾಲ ಪಡೆಯಲು ಇದು ಸಹಾಯಕವಾಗುತ್ತದೆ. ಅಂದರೆ, ಮುದ್ರಾ ಯೋಜನೆ ಕೇವಲ ಪ್ರಾರಂಭಿಕ ನೆರವಷ್ಟೇ ಅಲ್ಲ, ದೀರ್ಘಕಾಲಿಕ ಆರ್ಥಿಕ ಬೆಳವಣಿಗೆಯಿಗೂ ಬಲ ನೀಡುತ್ತದೆ.

ಆರ್ಥಿಕ ಒಳಗೊಳ್ಳುವಿಕೆಗೆ (Financial Inclusion) ಮಹತ್ವ

ಗ್ರಾಮೀಣ ಪ್ರದೇಶಗಳಲ್ಲಿಯೂ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜನರನ್ನು ಸಂಪರ್ಕಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರವಹಿಸಿದೆ. ಬ್ಯಾಂಕ್ ಖಾತೆ ಇಲ್ಲದವರು ಖಾತೆ ತೆರೆಯಲು ಪ್ರೇರೇಪಿತರಾಗಿದ್ದಾರೆ. ಇದರಿಂದ ಸರ್ಕಾರದ ಇತರೆ ಸಬ್ಸಿಡಿ ಹಾಗೂ ಯೋಜನೆಗಳ ಪ್ರಯೋಜನವನ್ನೂ ಸುಲಭವಾಗಿ ಪಡೆಯಬಹುದು.

ಯಶಸ್ವಿ ಕಥೆಗಳು

ದೇಶದ ಅನೇಕ ಭಾಗಗಳಲ್ಲಿ ಮುದ್ರಾ ಸಾಲ ಪಡೆದು ಸಣ್ಣ ಚಹಾ ಅಂಗಡಿ, ಮಿನಿ ಟ್ರಾನ್ಸ್‌ಪೋರ್ಟ್ ಸೇವೆ, ಬೇಕರಿ, ಮೊಬೈಲ್ ಅಂಗಡಿ ಮುಂತಾದ ಉದ್ಯಮಗಳನ್ನು ಆರಂಭಿಸಿ ಸಾವಿರಾರು ಜನರು ಸ್ವಾವಲಂಬಿಗಳಾಗಿದ್ದಾರೆ. ಕೆಲವು ಉದ್ಯಮಿಗಳು ಸಣ್ಣ ಮಟ್ಟದಿಂದ ಆರಂಭಿಸಿ, ಇಂದು ಅನೇಕ ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.

ಒಟ್ಟಾರೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಯುವಕರು, ಮಹಿಳೆಯರು ಮತ್ತು ಸಣ್ಣ ಉದ್ಯಮಿಗಳಿಗೆ ಆತ್ಮವಿಶ್ವಾಸ ತುಂಬುವ ಯೋಜನೆ. ಸರಿಯಾದ ಯೋಜನೆ, ಹಣಕಾಸಿನ ಶಿಸ್ತು ಮತ್ತು ಪರಿಶ್ರಮ ಇದ್ದರೆ, ಈ ಸಾಲವನ್ನು ಬಳಸಿಕೊಂಡು ಸ್ವಂತ ಉದ್ಯೋಗ ನಿರ್ಮಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಉದ್ಯಮಿಗಳ ಪಾತ್ರವನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಯೋಜನೆ ಪ್ರಮುಖ ಹೆಜ್ಜೆಯಾಗಿದೆ.

Read more : – https://kapublic.com/subsidy-for-sheep-and-goat-farming-last-date-march-6/

Link :https://www.myscheme.gov.in/schemes/kcc

Leave a Comment