ಬಾಂಬೆ ಐಐಟಿಯಲ್ಲಿ 19 ಹುದ್ದೆಗಳ ನೇಮಕಾತಿ; ಮಾರ್ಚ್ 16 ಕೊನೆಯ ದಿನ
ಬಾಂಬೆಯಲ್ಲಿ ಐಐಟಿಯ 19 ಹುದ್ದೆಗಳನ್ನ ಭರ್ತಿ ಮಾಡೋಕೆ ಅಧಿಸೂಚನೆ ಸಿಕ್ಕಿದೆ.ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮಾರ್ಚ್ 16, 2026 ಅರ್ಹತೆ,ವಯೋಮಿತಿ,ಶುಲ್ಕ, ಆಯ್ಕೆ ಮಾಡೋದರ ಬಗ್ಗೆ ಎಲ್ಲಾ ಮಾಹಿತಿಗಳನ್ನು ವಿವರಿಸಲಾಗಿದೆ.
ದೇಶದ ಮುಖ್ಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬಾಂಬೆ ಐಐಟಿಯೂ ಒಂದಾಗಿದ್ದು; ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಹಾಗೂ ಅರ್ಹತೆಯನ್ನ ಹೊಂದಿರುವ ಅಭ್ಯರ್ಥಿಗಳು ಮಾರ್ಚ್ 16ರ ಒಳಗೆ ಅಧಿಕೃತವಾದ ವೆಬ್ ಸೈಟ್ ಮೂಲಕ ಆನ್ಲೈನ್ ಲ್ಲಿ ಅರ್ಜಿ ತುಂಬಬೇಕು.
ಬಾಂಬೆ ಐಐಟಿ ಎಂದರೇನು?
IIT Bombay ಅಂದರೆ Indian Institute of Technology Bombay. ಇದು ಭಾರತದ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. 1958 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಎಲ್ಲಿದೆ?
IIT Bombay ಮಹಾರಾಷ್ಟ್ರ ರಾಜ್ಯದ ಮುಂಬೈ ನಗರದಲ್ಲಿದೆ. ನಿಖರವಾಗಿ ಹೇಳಬೇಕೆಂದರೆ ಪವಾಯ್ ಎಂಬ ಪ್ರದೇಶದಲ್ಲಿ ನೆಲೆಗೊಂಡಿದೆ. ಇದು ಮುಂಬೈ ನಗರದ ಉತ್ತರ ಭಾಗದಲ್ಲಿದ್ದು ಪವಾಯ್ ಸರೋವರದ ಸಮೀಪ ಇದೆ.
ಮುಖ್ಯ ವಿಷಯಗಳು
ಸ್ಥಾಪನೆ: 1958 ಸ್ಥಳ: ಪವಾಯ್, ಮುಂಬೈ, ಮಹಾರಾಷ್ಟ್ರ ವಿಧ: ಸ್ವಾಯತ್ತ ಸರ್ಕಾರಿ ತಾಂತ್ರಿಕ ವಿಶ್ವವಿದ್ಯಾಲಯ ಕ್ಯಾಂಪಸ್ ವಿಸ್ತೀರ್ಣ: ಸುಮಾರು 550 ಎಕರೆ ರಾಷ್ಟ್ರೀಯ ಶ್ರೇಯಾಂಕ: ಭಾರತದ ಅಗ್ರ 3 ಐಐಟಿಗಳಲ್ಲಿ ಒಂದು
ಯಾವ ಕೋರ್ಸ್ಗಳು ಇವೆ?
ಇಂಜಿನಿಯರಿಂಗ್ ವಿಭಾಗಗಳು ಅನೇಕ ಇವೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ಕೆಮಿಕಲ್ ಎಂಜಿನಿಯರಿಂಗ್ ಜೊತೆಗೆ MBA, MSc ಮತ್ತು PhD ಕೋರ್ಸ್ಗಳು ಕೂಡ ಲಭ್ಯ.
ಯಾರೆಲ್ಲಾ ಅರ್ಜಿ ಹಾಕ್ಬೋದು?
ತಾಂತ್ರಿಕ ಹುದ್ದೆಗಳಿಗೆ
ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್ ಅಥವಾ ಕೆಮಿಕಲ್ ಎಂಜಿನಿಯರಿಂಗ್ ಸೇರಿದಂತೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಬಿ.ಇ./ಬಿ.ಟೆಕ್./ಎಂ.ಎಸ್ಸಿ. ಪದವಿ ಪಡೆದಿರುವವರು. ಪರ್ಯಾಯವಾಗಿ 3 ವರ್ಷದ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳೂ ಸಹ ಅರ್ಜಿ ಹಾಕಬಹುದು. ಜೊತೆಗೆ ಸಂಬಂಧಿಸಿರೋ ಕ್ಷೇತ್ರದಲ್ಲಿ ಅನುಭವ ಇರ್ಬೇಕು.
Teaching ಪೋಸ್ಟ್ಗಳು
CTET ಅಥವಾ MTET ಯಲ್ಲಿ ಅರ್ಹತೆಯನ್ನ ಪಡೆದುಕೊಂಡಿರ್ಬೇಕು. ಕನಿಷ್ಠ 50% ಅಂಕಗಳನ್ನಾದ್ರೂ ಪದವಿ ಮತ್ತು ಬಿ.ಎಡ್ ಪದವಿಯಲ್ಲಿ ಪಡೆದುಕೊಂಡಿರ್ಬೇಕು. ಕೆಲವು ಹುದ್ದೆಗಳಿಗೆ ಮೊದಲೇ teaching experience ಕಡ್ಡಾಯ ಆಗಿ ಮುಗಿಸಿರ್ಬೇಕು. ಪೂರ್ವ ಪ್ರಾಥಮಿಕ ಶಿಕ್ಷಕರ ಹುದ್ದೆಗಳಿಗೆ ವಿಶೇಷ ತರಬೇತಿ ಅಥವಾ ಡಿಪ್ಲೋಮಾ ಮಾಡಿರಲೇಬೇಕು.
ಪ್ರಯೋಗಾಲಯ ಸಹಾಯಕ ಹುದ್ದೆಗೆ:
ಎಂಜಿನಿಯರಿಂಗ್ನಲ್ಲಿ 3 ವರ್ಷಗಳ ಡಿಪ್ಲೊಮಾ ಆಗಿರ್ಬೇಕು, ಅಥವಾ ಐಟಿಐ ಪ್ರಮಾಣಪತ್ರ, ಅಥವಾ ಭೌತಶಾಸ್ತ್ರ/ಎಲೆಕ್ಟ್ರಾನಿಕ್ಸ್ನಲ್ಲಿ ಪದವಿ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು.
ವಯೋಮಿತಿ ಎಷ್ಟಿರಬೇಕು?
ತಾಂತ್ರಿಕ ಅಧಿಕಾರಿ (ಸ್ಕೇಲ್ I) ಹುದ್ದೆಗೆ ಗರಿಷ್ಠ ವಯಸ್ಸು 40 ವರ್ಷಗಳು ಆಗಿರ್ಬೇಕು. ತಾಂತ್ರಿಕ ಸೂಪರಿಂಟೆಂಡೆಂಟ್ ಮತ್ತು ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 32 ವರ್ಷಗಳು. ಜೂನಿಯರ್ ಲ್ಯಾಬ್ ಅಸಿಸ್ಟೆಂಟ್ ಮತ್ತು ತಾತ್ಕಾಲಿಕ ಪೂರ್ವ ಪ್ರಾಥಮಿಕ ಶಿಕ್ಷಕರ ಹುದ್ದೆಗಳಿಗೆ ಗರಿಷ್ಠ ವಯಸ್ಸು 27 ವರ್ಷಗಳು ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು, ಅಂಗವಿಕಲ ಅಭ್ಯರ್ಥಿಗಳು ಮತ್ತು ಸಂಸ್ಥೆಯ ನೌಕರರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ದೊರೆಯುತ್ತದೆ.
ಅರ್ಜಿಯ ಶುಲ್ಕ ಎಷ್ಟು?
ಅರ್ಜಿ ಶುಲ್ಕವನ್ನು ಆನ್ಲೈನ್ ಪೋರ್ಟಲ್ ಮೂಲಕ ಮಾತ್ರ ಪಾವತಿ ಮಾಡಬೇಕು. ಸಾಮಾನ್ಯ, ಒಬಿಸಿ (ಎನ್ಸಿಎಲ್) ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ₹500 ಅಥವಾ ₹250 (ಹುದ್ದೆಗೆ ಅನುಗುಣವಾಗಿ) ಶುಲ್ಕ ನಿಗದಿ ಮಾಡಿದ್ದಾರೆ. ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಅರ್ಜಿಗಳ ಪರಿಶೀಲನೆ: ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಪ್ರಾಥಮಿಕ ಕಿರುಪಟ್ಟಿ ತಯಾರಿಸುತ್ತಾರೆ.
ಲಿಖಿತ ಪರೀಕ್ಷೆ: ವಿಷಯ ಜ್ಞಾನ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಅಳೆಯಲು ಪರೀಕ್ಷೆ ನಡೆಯಬಹುದು.
ಕೌಶಲ್ಯ ಪರೀಕ್ಷೆ: ತಾಂತ್ರಿಕ ಅಥವಾ ಬೋಧನಾ ಹುದ್ದೆಗಳಿಗೆ ಪ್ರಾಯೋಗಿಕ ಪರೀಕ್ಷೆ ಸಾಧ್ಯ.
ಸಂದರ್ಶನ: ಉನ್ನತ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಸಂದರ್ಶನ.
ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ: ಅಂತಿಮ ಆಯ್ಕೆಗೆ ಮುನ್ನ ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ಕಡ್ಡಾಯ.
ಅರ್ಜಿ ಸಲ್ಲಿಸೋದು ಹೇಗೆ?
ಅಭ್ಯರ್ಥಿಗಳು ಮೊದಲು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ಸಂಬಂಧಿತ ಹುದ್ದೆಯನ್ನು ಆಯ್ಕೆಮಾಡಬೇಕು. ನಂತರ ಆನ್ಲೈನ್ ಅರ್ಜಿ
ನಮೂನೆಯನ್ನು ಸಂಪೂರ್ಣ ಹಾಗೂ ಸರಿಯಾದ ಮಾಹಿತಿಗಳೊಂದಿಗೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನಿಗದಿತ ನಮೂನೆಯಲ್ಲಿ ಅಪ್ಲೋಡ್ ಮಾಡಬೇಕು. ಅನ್ವಯವಾಗಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ, ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಮರುಪರಿಶೀಲಿಸಿ ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಮುಂದಿನ ದಾಖಲೆಗಾಗಿ ಅರ್ಜಿ ಪ್ರತಿಯನ್ನು print ತೆಗೆದುಕೊಂಡು ಸುರಕ್ಷಿತವಾಗಿಡುವುದು ಅಗತ್ಯ.
ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ?
ಪಾಸ್ ಪೋರ್ಟ್ ಅಳತೆ ಪೋಟೋ
ಆಧಾರ್ ಕಾರ್ಡ್
ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ
ಜಾತಿ ಪ್ರಮಾಣ ಪತ್ರ
ಎಕ್ಸ್ಪೆರಿಯೆನ್ಸ್ ಲೆಟರ್
ಎಲ್ಲವುಗಳನ್ನೂ ಸ್ಕ್ಯಾನ್ ತಯಾರು ಮಾಡಿಟ್ಕೊಳ್ಳಿ. ಸಹಿ ಮತ್ತು ಪೋಟೋವನ್ನು ಸರಿಯಾದ ಅಳತೆಯಲ್ಲಿ ಎಡಿಟ್ ಮಾಡಿ ಅಪ್ಲೋಡ್ ಮಾಡ್ಬೇಕು. ತಪ್ಪಾದ ಮಾಹಿತಿ ಕೊಟ್ರೆ ಅರ್ಜಿ ರಿಜೆಕ್ಟ್ ಆಗ್ಬಹುದು. ಹಾಗಾಗಿ ಎಲ್ಲಾ ವಿವರಗಳನ್ನ ಸರಿಯಾಗಿ ತುಂಬಿದ್ದೀರಾ ಎಂದು ಚೆಕ್ ಮಾಡಿ. ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ಔಟ್ ತಗೊಂಡು ಇಟ್ಕೊಳೋದು ಒಳ್ಳೆಯದು.
ಬಾಂಬೆಯ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡೋ ಚಾನ್ಸ್ ಸಿಕ್ಕೋದು ಬಹಳ ಅಪರೂಪ. ಉತ್ತಮವಾಗಿರೋ ವೇತನ, ಲಾಂಗ್ ಟೈಮ್ ಸೇಪ್ ಆಗಿರೋ ಅವಕಾಶ ಸಿಗ್ತಾ ಇದೆ. ಅವಕಾಶವನ್ನು ಮಿಸ್ ಮಾಡ್ಕೊಳ್ಳಬೇಡಿ. ಏನೆಲ್ಲಾ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ್ದಾರೆ ಅದನ್ನ ಸರಿಯಾಗಿ ಓದಿಕೊಂಡು; ಸರಿಯಾಗಿ ಅರ್ಜಿ ಭರ್ತಿ ಮಾಡಿ. ಸಣ್ಣ ತಪ್ಪು ಕೂಡ ದೊಡ್ಡ ಅವಕಾಶದಿಂದ ವಂಚಿತರಾಗೋ ಹಾಗೆ ಮಾಡ್ಬೋದು. ದೊಡ್ಡ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸೋದು ಕೂಡ ಅಷ್ಟೇ ನಿಖರವಾಗಿ ಇರ್ಬೇಕಾಗುತ್ತೆ. ಆದ್ದರಿಂದ ಜಾಗೂಕತೆಯಿಂದ ಅರ್ಜಿ ಸಲ್ಲಿಸಿ.
ಸಂದರ್ಶನಕ್ಕೆ ಹೋಗುವ ತಯಾರಿಯನ್ನು ಈಗಲೇ ಮಾಡಿಟ್ಟುಕೊಳ್ಳಿ. ಎಲ್ಲಾ ಕೆಲಸಗಳಿಗೂ ಆತ್ಮವಿಶ್ವಾಸವೇ ಮೊದಲ ಗೆಲುವು. ಕನಸು ಕಾಣಬೇಕು. ನನಸಾಗುವ ಸಮಯದಲ್ಲಿ ಧೈರ್ಯವಾಗಿ ಮಾಡಬೇಕಾದ ಕೆಲಸಗಳನ್ನು ಅಚ್ಚುಕಟ್ಟಾಗಿ , ಚೆನ್ನಾಗಿ ಮಾಡ್ಬೇಕು. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ನಿಮ್ಮ ಗೆಳಯರಿಗೆ,ಗೆಳತಿಯರಿಗೆ. ಬಂಧುಬಳಗದವರಿಗೂ ಈ ಮಾಹಿತಿಯನ್ನ ಹಂಚಿ.
ಪರೀಕ್ಷೆಗೆ ನಿಮ್ಮ ತಯಾರಿ ಹೀಗಿರಲಿ
ಸಾಮಾನ್ಯ ಜ್ಞಾನ ಮತ್ತು general knowledge ವಿಷಯಗಳನ್ನು ಪ್ರತಿ ದಿನ ಓದಿ. ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಯಾವ ಪ್ರದೇಶದಲ್ಲಿ ಕೆಲಸ ಮಾಡುತ್ತೀರೋ ಆಯಾ ಜನರ ದಿನನಿತ್ಯದ ಬಳಕೆಯ ಭಾಷೆಗಳನ್ನ ಬಳಸಲು ಕಲಿತರೆ ಹೆಚ್ಚು ಉಪಯುಕ್ತ. ಇಂಗ್ಲೀಷ್ ಅಂತೂ ಕಡ್ಡಾಯವಾಗಿ ಬರಲೇಬೇಕು. ಆದರೆ ಇಂಗ್ಲೀಷ್ ಬರದೇ ಇದ್ದರೆ ಭಯ ಪಡೋದು ಬೇಡ. ಸಂದರ್ಷನಕ್ಕೆ ಎಷ್ಟು ಬೇಕೋ ಆ ರೀತಿಯ ತಯಾರಿಯನ್ನು ಮಾಡಿಟ್ಟುಕೊಳ್ಳಿ. ಕಂಪ್ಯೂಟರ್ knowledge ಅಂತೂ ಬೇಕೇ ಬೇಕು. ಹಳೆಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನ ಬಿಡಿಸುವುದು ಹೆಚ್ಚು ಉಪಯುಕ್ತ. ನಿಯಮಿತವಾಗಿ ಅಧ್ಯಯನ ಮಾಡಲೇಬೇಕು. ಜೊತೆಗೆ ಸರಿಯಾಗಿರೋ ಪ್ಲಾನ್ ಪ್ರಕಾರ ಓದುವ ಅಭ್ಯಾಸ ಮಾಡಿಕೊಳ್ಳಿ. ಇವೆಲ್ಲವುಗಳನ್ನ ಪಾಲಿಸೋದರಿಂದ ಯಶಸ್ಸು ಸಿಕ್ಕೇ ಸಿಗುತ್ತೆ.
ಈ ಉದ್ಯೋಗ ನಿಮ್ಮ ಬದುಕನ್ನೇ change ಮಾಡ್ಬೋದು
ತುಂಬಾ ಜನರಿಗೆ governmet ಜಾಬ್ ಮಾಡೋ ಕನಸು ಇರುತ್ತೆ. ಬಾಂಬೆಯಲ್ಲಿ ಅದೂ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡೋ chance ಸಿಕ್ಕೋದು ಅಪರೂಪ. ಒಂದು ಸಲ ಅವಕಾಶ ಕೈ ತಪ್ಪಿ ಹೋದರೆ ಮತ್ತೆ ಸಿಕ್ಕೇ ಬಿಡುತ್ತೆ ಅನ್ನೋದಕ್ಕೆ ಗ್ಯಾರಂಟಿ ಇಲ್ಲ.. ಕೊನೆದಿನ ಮಾರ್ಚ್ 16 ಅನ್ನೋದು ನೆನಪಿರಲಿ.
ಅರ್ಜಿ ಸಲ್ಲಿಸುವ ಮೊದಲು ಈ ವಿಷಯ ತಿಳಿಯಿರಿ
ಅಧಿಕೃತ ಅಧಿಸೂಚನೇ ಏನಿದೆ? ಸರಿಯಾಗಿ ಓದಿಕೊಂಡು ಅದರಂತೆಯೇ ನಿಮ್ಮ ದಾಖಲೆಗಳನ್ನು ಭರ್ತಿ ಮಾಡಿದ್ದೀರಾ ಗಮನಿಸಿ, ಪರಿಶೀಲಿಸಿ.ಎಲ್ಲಾ ದಾಖಲೆಗಳಲ್ಲೂ ಹೆಸರು, ವಿಳಾಸ ಎಲ್ಲಾ ಸರಿಯಾಗಿದೆಯಾ? ಚೆಕ್ ಮಾಡ್ಕೊಳ್ಳಿ. ಹಾಗೇ ಎಲ್ಲಾ ಕಡೆ ಹೆಸರನ್ನು ಒಂದೇ ತರಹ ಬಳಸಿ. ವಯಸ್ಸಿನ ಮಿತಿ ಎಷ್ಟಿದೆ ಅನ್ನೋ ಮಾಹಿತಿ ಮೊದಲು ತಿಳಿದಿರಲಿ. ಅರ್ಜಿ ಸಲ್ಲಿಸಿದ ಮೇಲೆ ಸರಿಯಾದ ವಿಧಾನದಲ್ಲಿ ಶುಲ್ಕ ಪಾವತಿಸೋದು ಕೂಡ important. ಯಾವುದೇ ಮಾಹಿತಿಗಳನ್ನು ಕೂಡ ಸರಿಯಾಗಿ ತುಂಬಿದರೆ ನಮ್ಮ ಮೊಬೈಲ್ ಸಂಖ್ಯೆಗೆ ಕಾಲ್ ಮಾಡಿದ್ದರೆ ಅಥವಾ ಮೆಸೆಜ್ ಬಂದಿದೆ ಅಂತಾದರೆ ಸರಿಯಾಗಿ ಗಮನ ಹರಿಸಿ ತಿಳಿದಿಟ್ಟುಕೊಳ್ಳಿ. ಅಧೀಕೃತ ವೆಬ್ಸೈಟ್ ಅನ್ನು ಆಗಾಗ ಚೆಕ್ ಮಾಡ್ತಾ ಇರಿ.
Read more : –https://kapublic.com/dina-bhavishya-march-2-2026-rashi-phala-kannada/#more-913
Link : –http://www.iitb.ac.in/

I am a teacher, blogger, and storyteller who shares creative and informative content for readers. i write on the storytelling platform Pratilipi and is the author of the Kannada book ಶ್…ಶ್.. ಸುಮ್ನಿರಿ ಇದು ಅಮ್ಮಂದಿರಿಗೆ. Along with teaching, i enjoys story writing and Mandala art, using creativity to inspire and connect with people through my work.