Telegram Join My Telegram WhatsApp Join My WhatsApp

ಚಂದ್ರಗ್ರಹಣ ಅಂತ ಹೆದರ್ಬೇಡಿ! ಅದೃಷ್ಟ ಖುಲಾಯಿಸುತ್ತೆ!!

ಚಂದ್ರಗ್ರಹಣ ಅಂತ ಹೆದರ್ಬೇಡಿ! ಅದೃಷ್ಟ ಖುಲಾಯಿಸುತ್ತೆ

ಚಂದ್ರಗ್ರಹಣ ನಾಳೆ, ಹೋಳಿ ಹಬ್ಬವೂ ನಾಳೆ ಇದೆ ಅಂತ ಹೆದರೋದು ಬೇಡ. ನಾಳೆ ಚಂದ್ರಗ್ರಹಣ ವಿಶೇಷವಾಗಿದೆ. ಎಲ್ಲಾ ರಾಶಿಗಳ ಮೇಲೆ ಶುಭಫಲಗಳು ಇವೆ. ಗ್ರಹಣದ ಸಮಯದಲ್ಲಿ ದೇವರನಾಮ, ಮಂತ್ರ, ಜಪಗಳನ್ನು ಮಾಡೋದರ ಮೂಲಕ ನಿಮ್ಮ ಶಕ್ತಿಯನ್ನ ಹೆಚ್ಚಿಸಿಕೊಳ್ಳಬಹುದು ಅಂತ ಆಧ್ಯಾತ್ಮಿಕತೆಯನ್ನು ಅನುಸರಿಸುವವರು ಹೇಳುತ್ತಾರೆ. ಆದರೆ ವಿಜ್ಞಾನಿಗಳು ಭಾರತದಲ್ಲಿ ಸ್ವಲ್ಪೇ ಸ್ವಲ್ಪ ಕಾಣುವ 2026 ರ ಚಂದ್ರಗ್ರಹಣ ಅಷ್ಟೇನೂ ವಿಸ್ಮಯಕಾರಿಯಾಗಿ ಕಾಣಿಸಲ್ಲ ಅಂತ ಹೇಳ್ತಾ ಇದ್ದಾರೆ. ಅಂತ್ಯದಲ್ಲಿ ಸ್ವಲ್ಪ ಕಾಣಿಸುತ್ತೆ ಅಂತ ಅವರ ಅಭಿಪ್ರಾಯ.

ಅಂತ್ಯಕಾಲದಲ್ಲಿ ಸ್ವಲ್ಪ ಹೊತ್ತು ಕಾಣಿಸುತ್ತೆ

ಶೇಕಡಾ 8ರಿಂದ 15ರಷ್ಟು ಗೋಚರ. 3.20 ಕ್ಕೆ ಗ್ರಹಣ ಶುರುವಾಗಿ 4.34 ಕ್ಕೆ ಖಗ್ರಾಸ ಆರಂಭವಾಗುತ್ತೆ. 5.32ಕ್ಕೆ ಖಗ್ರಾಸ ಗ್ರಹಣ ಮುಗ್ದು  ಹೋಗಿಬಿಡುತ್ತೆ. 6.47ಕ್ಕೆ ಗ್ರಹಣವೇ ಮುಗಿದು ಹೋಗುತ್ತೆ. ಗ್ರಹಣ ಅಂತ್ಯಕಾಲದಲ್ಲಿ ಸ್ವಲ್ಪ ಹೊತ್ತು ಕಾಣ್ಸುತ್ತೆ ಆದರೆ ಆಗ ನಮ್ಮ ಭಾಗದಲ್ಲಿ ಚಂದ್ರೋದಯ ಆಗುತ್ತದೆ. 6.38 ರಿಂದ 6.47 ರವರೆಗೆ 9 ನಿಮಿಷ ಗ್ರಹಣದ ಚಂದ್ರ ಕಾಣಿಸುತ್ತಾನೆ ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಸೂರ್ಯಗ್ರಹಣದಷ್ಟು ಚಂದ್ರಗ್ರಹಣ ಗೋಚರಿಸೋದಿಲ್ಲ ಆದ್ದರಿಂದ ಬರಿಗಣ್ಣಿನಲ್ಲಿ ನೋಡಲು ತೊಂದರೆಯಿಲ್ಲ. ಈ ವರ್ಷ ನಮ್ಮಲ್ಲಿ ಗೋಚರಿಸೋದು ಇದೊಂದೆ ಗ್ರಹಣವಂತೆ.

ಟೇಲಿಸ್ಕೋಪ್‌ ನಲ್ಲಿ ಚಂದ್ರನ ಬಿಂಬ ನೋಡಬಹುದು. ಸುಂದರವಾಗಿ ಕಾಣಿಸ್ತಾನೆ.

ಚಂದ್ರ ಕೆಂಪಾಗುವ ರಹಸ್ಯ

ಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ಚಂದ್ರ ಕಡುಕೆಂಪು ಅಥವಾ ತಾಮ್ರದ ಬಣ್ಣಕ್ಕೆ ತಿರುಗುತ್ತಾನೆ. ಇದನ್ನು “ಬ್ಲಡ್ ಮೂನ್” ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಭೂಮಿಯ ವಾತಾವರಣ. ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾಗ, ನೀಲಿ ಬಣ್ಣದ ಕಿರಣಗಳು ಚದುರಿಹೋಗಿ, ಕೆಂಪು ಕಿರಣಗಳು ಮಾತ್ರ ಚಂದ್ರನ ಮೇಲೆ ಬೀಳುತ್ತವೆ. ಹಾಗಾಗಿ ಚಂದ್ರ ಕೆಂಪಾಗಿ ಕಾಣಿಸಿಕೊಳ್ಳುತ್ತಾನೆ. ಇದನ್ನು “ರೇಲೀ ಸ್ಕ್ಯಾಟರಿಂಗ್” ಎಂಬ ವೈಜ್ಞಾನಿಕ ಪ್ರಕ್ರಿಯೆ ಎಂದು ಹೇಳಲಾಗುತ್ತದೆ.

ಮೂರು ವಿಧದ ಚಂದ್ರಗ್ರಹಣ

ಚಂದ್ರಗ್ರಹಣ ಮೂರು ವಿಧಗಳಲ್ಲಿ ಸಂಭವಿಸುತ್ತದೆ — ಪೂರ್ಣ ಚಂದ್ರಗ್ರಹಣ, ಆಂಶಿಕ ಚಂದ್ರಗ್ರಹಣ ಮತ್ತು ಛಾಯಾ ಚಂದ್ರಗ್ರಹಣ (ಪೆನಂಬ್ರಲ್). ಛಾಯಾ ಚಂದ್ರಗ್ರಹಣ ಎಷ್ಟು ಸೂಕ್ಷ್ಮವಾಗಿರುತ್ತದೆ ಎಂದರೆ, ಅದನ್ನು ಸಾಮಾನ್ಯ ಕಣ್ಣಿನಿಂದ ಗ್ರಹಿಸುವುದು ತುಂಬಾ ಕಷ್ಟ.

ಸಾರ್ರೊಸ್ ಚಕ್ರ

ಚಂದ್ರಗ್ರಹಣ ಒಂದು ನಿರ್ದಿಷ್ಟ ಕ್ರಮದಲ್ಲಿ ಪುನರಾವರ್ತನೆಯಾಗುತ್ತದೆ. ಇದನ್ನು “ಸಾರ್ರೊಸ್ ಚಕ್ರ” ಎಂದು ಕರೆಯಲಾಗುತ್ತದೆ. ಸರಿಸುಮಾರು ೧೮ ವರ್ಷ, ೧೧ ದಿನ ಮತ್ತು ೮ ಗಂಟೆಗಳ ನಂತರ ಅದೇ ರೀತಿಯ ಗ್ರಹಣ ಮರುಕಳಿಸುತ್ತದೆ. ಪ್ರಾಚೀನ ಕಾಲದ ಖಗೋಳ ಶಾಸ್ತ್ರಜ್ಞರು ಈ ಚಕ್ರವನ್ನು ಅರ್ಥ ಮಾಡಿಕೊಂಡು ಗ್ರಹಣವನ್ನು ಮುಂಚಿತವಾಗಿ ಊಹಿಸುತ್ತಿದ್ದರು.

ಚಂದ್ರಗ್ರಹಣ ಮತ್ತು ಪ್ರಾಣಿಗಳ ನಡವಳಿಕೆ

ಚಂದ್ರಗ್ರಹಣದ ಸಮಯದಲ್ಲಿ ಪ್ರಾಣಿಗಳ ನಡವಳಿಕೆಯಲ್ಲಿ ವಿಚಿತ್ರ ಬದಲಾವಣೆಗಳು ಕಂಡುಬರುತ್ತವೆ. ಹಕ್ಕಿಗಳು ತಮ್ಮ ಗೂಡಿಗೆ ಹಿಂತಿರುಗುತ್ತವೆ, ನಿಶಾಚರ ಪ್ರಾಣಿಗಳು ಎಚ್ಚರಗೊಳ್ಳುತ್ತವೆ. ಕೆಲವು ಸಮುದ್ರ ಜೀವಿಗಳು, ವಿಶೇಷವಾಗಿ ಹವಳದ ಬಂಡೆಗಳ ಮೇಲಿರುವ ಜೀವಿಗಳು, ಚಂದ್ರಗ್ರಹಣದ ಸಮಯದಲ್ಲಿ ತಮ್ಮ ಮೊಟ್ಟೆ ಇಡುವ ಪ್ರಕ್ರಿಯೆಯನ್ನು ಬದಲಿಸಿಕೊಳ್ಳುತ್ತವೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಇತಿಹಾಸದಲ್ಲಿ ಚಂದ್ರಗ್ರಹಣ

ಕ್ರಿಸ್ತ ಪೂರ್ವ ೪೧೩ ರಲ್ಲಿ ಅಥೆನ್ಸ್ ಮತ್ತು ಸಿರಾಕ್ಯೂಸ್ ನಡುವಿನ ಯುದ್ಧದಲ್ಲಿ ಚಂದ್ರಗ್ರಹಣ ನಿರ್ಣಾಯಕ ಪಾತ್ರ ವಹಿಸಿತು. ಅಥೆನ್ಸ್ ಸೇನೆ ಚಂದ್ರಗ್ರಹಣ ಕಂಡು ಭಯಭೀತರಾಗಿ ತಮ್ಮ ಪ್ರಯಾಣವನ್ನು ತಡೆದರು. ಇದು ಶತ್ರುಗಳಿಗೆ ಅವರನ್ನು ಸೋಲಿಸಲು ಅವಕಾಶ ಮಾಡಿಕೊಟ್ಟಿತು. ಈ ಘಟನೆ ಚಂದ್ರಗ್ರಹಣದ ಐತಿಹಾಸಿಕ ಮಹತ್ವವನ್ನು ತೋರಿಸುತ್ತದೆ.

ಚಂದ್ರಗ್ರಹಣ ಮತ್ತು ಭೂಮಿಯ ಛಾಯೆ

ಚಂದ್ರಗ್ರಹಣದ ಸಮಯದಲ್ಲಿ ಚಂದ್ರನ ಮೇಲೆ ಬೀಳುವ ಭೂಮಿಯ ಛಾಯೆಯ ಅಂಚು ಯಾವಾಗಲೂ ವೃತ್ತಾಕಾರದಲ್ಲಿರುತ್ತದೆ. ಈ ಅವಲೋಕನದಿಂದ ಪ್ರಾಚೀನ ಗ್ರೀಕ್ ಚಿಂತಕ ಅರಿಸ್ಟಾಟಲ್ ಭೂಮಿ ಗೋಳಾಕಾರದಲ್ಲಿದೆ ಎಂದು ತೀರ್ಮಾನಕ್ಕೆ ಬಂದರು. ಆ ಕಾಲದಲ್ಲಿ ಇದು ಒಂದು ಕ್ರಾಂತಿಕಾರಿ ಚಿಂತನೆಯಾಗಿತ್ತು.

ಚಂದ್ರ ಮೇಲಿನ ತಾಪಮಾನ ಬದಲಾವಣೆ

ಚಂದ್ರಗ್ರಹಣದ ಸಮಯದಲ್ಲಿ ಚಂದ್ರನ ಮೇಲ್ಮೈ ತಾಪಮಾನ ಕೇವಲ ಒಂದೆರಡು ಗಂಟೆಗಳಲ್ಲಿ ಸರಿಸುಮಾರು ೨೫೦ ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿದುಹೋಗುತ್ತದೆ. ಚಂದ್ರನಿಗೆ ವಾತಾವರಣ ಇಲ್ಲದ ಕಾರಣ, ಶಾಖವನ್ನು ಹಿಡಿದಿಡಲು ಸಾಧ್ಯವಾಗದೆ ತಕ್ಷಣ ತಂಪಾಗಿಬಿಡುತ್ತದೆ.

ಅನೇಕ ಜನರು ಚಂದ್ರಗ್ರಹಣ ತಮ್ಮ ಅದೃಷ್ಟವನ್ನು ಸುಧಾರಿಸುತ್ತದೆ ಎಂದು ನಂಬುತ್ತಾರೆ. ವಿವಿಧ ಸಂಸ್ಕೃತಿಗಳಲ್ಲಿ ಚಂದ್ರಗ್ರಹಣವನ್ನು ಬದಲಾವಣೆ ಮತ್ತು ಹೊಸ ಆರಂಭದ ಸಂಕೇತವಾಗಿ ನೋಡಲಾಗುತ್ತದೆ. ಕೆಲವರು ಈ ಸಮಯದಲ್ಲಿ ಧ್ಯಾನ, ಪ್ರಾರ್ಥನೆ ಮತ್ತು ಸಕಾರಾತ್ಮಕ ಚಿಂತನೆ ಮಾಡುವುದರಿಂದ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಬರುತ್ತವೆ ಎಂದು ನಂಬುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣ ಒಂದು ಶಕ್ತಿಶಾಲಿ ಸಮಯ. ಈ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಒಳ್ಳೆಯ ಆಲೋಚನೆಗಳನ್ನು ಮಾಡಿದರೆ, ಅದು ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ.

ಆದರೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ಚಂದ್ರಗ್ರಹಣ ನೇರವಾಗಿ ನಮ್ಮ ಅದೃಷ್ಟವನ್ನು ಬದಲಿಸುವುದಿಲ್ಲ. ಆದರೆ ಅದು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಬಹುದು. ಒಳ್ಳೆಯ ಮನಸ್ಥಿತಿ, ಧನಾತ್ಮಕ ಚಿಂತನೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವುದೇ ನಿಜವಾದ ಅದೃಷ್ಟ. ಚಂದ್ರಗ್ರಹಣ ನಮಗೆ ಆತ್ಮಾವಲೋಕನ ಮಾಡಿಕೊಳ್ಳಲು ಒಂದು ಅವಕಾಶ ನೀಡುತ್ತದೆ — ಇದನ್ನು ಸದುಪಯೋಗ ಮಾಡಿಕೊಂಡರೆ ಜೀವನದಲ್ಲಿ ಖಂಡಿತ ಒಳ್ಳೆಯದಾಗುತ್ತದೆ!

ಗ್ರಹಣ ಎಂದರೆ ಭಯ ಬೇಡ

ನಾಳೆ ಸೂಪರ್‌ ಮೂನ್‌ ಇರಲ್ಲ ಆದ್ರೆ ಚಂದ್ರನ size ದೊಡ್ಡ ಇರುತ್ತೆ. ಇದು ಪ್ರಕೃತಿಯಲ್ಲಿ ನಡೆಯೋ ಅದ್ಬುತವಾಗಿರೋ ವಿಜ್ಞಾನ ಆದ್ರಿಂದ ಹೆದರೋದು ಬೇಡ ಅಂತ ಹೇಳಿದ್ದಾರೆ.

ಗ್ರಹಣ ಇರೋವಾಗ ಏನ್‌ ಮಾಡ್ಬೇಕು?

ಗ್ರಹಣದ ಕಾಲದಲ್ಲಿ ಗರ್ಭಿಣಿಯರು , ಮಕ್ಕಳು ಮನೆಯಲ್ಲೇ ಇರೋದು ಒಳ್ಳೆಯದು. ಗರ್ಭಿಣಿಯರು ಚೂಪಾದ, ಹರಿತವಾದ ವಸ್ತುಗಳ ಬಳಕೆಯನ್ನು ಮಾಡದೇ ಇರೋದು ಒಳ್ಳೆಯದು. ಹಾಗೇ ಗ್ರಹಣಕಾಲದಲ್ಲಿ ಅಕ್ಕಿ, ಉದ್ದು ತೆಗೆದಿರಿಸಿ. ಎಣ್ಣೆಯಲ್ಲಿ ಮುಖ ನೋಡಿ ಪ್ರಾರ್ಥನೆ ಮಾಡಿಕೊಳ್ಳಿ. ಇಂತಹ ಸಮಯದಲ್ಲಿ ಅನಾಹುತಗಳು ಸಂಭವಿಸುವ ಅಂಶ ಹೆಚ್ಚು ಆದ್ದರಿಂದ ಎಚ್ಚರಿಕೆಯಿಂದ ಇರೋದು ಒಳ್ಳೆಯದು.

ಮನೆಯ ಎಲ್ಲರೂ ಒಟ್ಟಿಗೆ ಕುಳಿತು ಧ್ಯಾನ , ದೀಪ ಹಚ್ಚಿ , ಪೂಜೆಗಳನ್ನು ಮಾಡೋದರಿಂದ ಹೆಚ್ಚಿನ ಫಲ ಸಿಗುತ್ತದೆ. ಯಾಕೆ ಅಂದ್ರೆ ಹದಿನೈದು ದಿನಕ್ಕೆ ನಡೆಯುವ ಚಂದ್ರನಲ್ಲಿನ ಬದಲಾವಣೆಗಳು ವೇಗದಲ್ಲಿ ಕೆಲವೇ ಕ್ಷಣಗಳಲ್ಲಿ ನಡೆದು ಹೋಗುವುದರಿಂದ ಆ ಕಾಲದಲ್ಲಿ ನಾವು ಮಾಡುವ ಒಳ್ಳೆ ಕೆಲಸಗಳ ಫಲ ಕೂಡ ದುಪ್ಪಟ್ಟಾಗುವುದರಿಂದ ಗ್ರಹಣ ಕಾಲದಲ್ಲಿ ಜಪ,ತಪಗಳನ್ನು ಮಾಡೋದು ಹೆಚ್ಚು ಲಾಭದಾಯಕ.

ಗ್ರಹಣ ಹಿಡಿಯುವ ಮೊದಲೇ ತುಳಸಿ ಎಲೆಗಳನ್ನು ನೀರು, ಹಾಲು, ತುಪ್ಪ, ಆಹಾರ ಪದಾರ್ಥಗಳಲ್ಲಿ ಹಾಕಿಡಬೇಕು. ವಾತಾವರಣದಲ್ಲಿ ಇರುವ ಬ್ಯಾಕ್ಟಿರಿಯಾಗಳ ಬೆಳವಣಿಗೆಯನ್ನು ನಿಯಂತ್ರಿಸೋ ಸಲುವಾಗಿ ಇದನ್ನು ಬಳಸುವುದು ಉತ್ತಮವಾದ ಪದ್ಧತಿ. ವೈಜ್ಞಾನಿಕವಾಗಿಯೂ , ಆಧ್ಯಾತ್ಮಿಕವಾಗಿಯೂ ಆಚರಣೆಗಳಿಗೆ ಒಂದು ಅರ್ಥ ಇರುತ್ತದೆ.

ಆರ್ಥಿಕ ಲಾಭ, ವ್ಯಾಪಾರದಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆಯಂತಹ ಸಕಾರಾತ್ಮಕ ಫಲಗಳನ್ನು ನಿರೀಕ್ಷೆ ಮಾಡಬಹುದು. ಆದರೆ ಸವಾಲುಗಳೂ ಕೂಡ ಇರುತ್ತೆ ಆದ್ದರಿಂದ ಜಗನ್ಮಾತೆಯನ್ನ ಸ್ಮರಿಸೋದರಿಂದ ಅವಳ ಕೃಪೆಯಲ್ಲಿ ಸುರಕ್ಷಿತವಾಗಿರಬಹುದು.

ವಿಶೇಷವಾಗಿ ತುಲಾ ರಾಶಿಯವರಿಗೆ ಹಣದ ಹರಿವು ಹಾಗೂ ಅನಿರಿಕ್ಷಿತವಾಗಿ ಆರ್ಥಿಕ ಲಾಭಗಳ ಸಾಧ್ಯತೆ. ಶತ್ರುಗಳೂ ಕೂಡ ಮಿತ್ರರಾಗುತ್ತಾರೆ. ಆರೋಗ್ಯದಲ್ಲಿ ಚೇತರಿಕೆ. ಮಕ್ಕಳಿಂದ ಶುಭ ಸುದ್ದಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಲಾಭ. ಸಾಲಗಳನ್ನ ತೀರಿಸೋದು ಉತ್ತಮ.

ಸೂಕ್ಷ್ಮ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ.

ಹಾಗೇ ಈ ಸಮಯದಲ್ಲಿ ಪ್ರಯಾಣ ಮಾಡಬೇಕಾ ಬೇಡ್ವಾ ಅನ್ನೋ ಗೊಂದಲ ಕೂಡ ಇರುತ್ತೆ. ಅಂತವರಿಗೆ ಪ್ರಯಾಣ ಮಾಡಬಹುದು ಆದರೆ ಅಡೆತಡೆಗಳು ಹೆಚ್ಚಾಗಿರುತ್ತೆ. ಆದ್ದರಿಂದ ಪ್ರಯಾಣ ಮಾಡಲೇಬೇಕಾದರೆ ಇಷ್ಟದೇವರನ್ನ ಸ್ಮರಿಸಿ ಪ್ರಯಾಣ ಶುರು ಮಾಡಬಹುದು. ಹಾಗೇ ಶುಭ್ರ ವಸ್ತ್ರ ಧರಿಸಿ ಪ್ರಯಾಣ ಮುಗಿಸಿದ ನಂತರ ಸ್ನಾನ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚಿ ಉತ್ತಮವಾದ ಭಾವನೆಯಿಂದ ಆತ್ಮವಿಶ್ವಾಸದಿಂದ ಇರಿ.

ಮಿಥುನ ರಾಶಿಯವರಿಗೂ ಉತ್ತಮ ಅದೃಷ್ಟ ಶುರು. ಆರ್ಥಿಕ ಪ್ರಗತಿ.ಮನೆ ವಾಹನ ಯೋಗ. ಆರೋಗ್ಯ ಸುಧಾರಣೆ. ವಾದವಿವಾದಗಳು , ಇತರರ ಮೇಲಿನ ಅತಿಯಾದ ನಂಬಿಕೆ ಕಡಿಮೆ ಮಾಡಿ ಎಚ್ಚರದಿಂದಿರಿ.

ಅದೃಷ್ಟ ಖುಲಾಯಿಸಲು ಏನು ಮಾಡಬೇಕು?

ಚಂದ್ರಗ್ರಹಣದ ಸಮಯದಲ್ಲಿ ಈ ಕೆಳಗಿನ ಕಾರ್ಯಗಳನ್ನು ಮಾಡುವುದು ಶ್ರೇಯಸ್ಕರ ಎಂದು ಹೇಳಲಾಗುತ್ತದೆ — ಶಿವನ ನಾಮ ಜಪಿಸುವುದು, ಮಹಾಮೃತ್ಯುಂಜಯ ಮಂತ್ರ ಪಠಿಸುವುದು, ಸ್ನಾನ ಮಾಡಿ ದಾನ ಮಾಡುವುದು ಮತ್ತು ಮನಸ್ಸನ್ನು ಶಾಂತವಾಗಿಟ್ಟುಕೊಂಡು ಧ್ಯಾನ ಮಾಡುವುದು. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ದೇವರಿಗೆ ನಮಸ್ಕರಿಸುವುದು ಶುಭ ಫಲ ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ನಮ್ಮ ಮನಸ್ಸಿನ, ಭಾವನೆಗಳ ಮತ್ತು ಅದೃಷ್ಟದ ಕಾರಕ ಗ್ರಹ. ಚಂದ್ರ ಶಕ್ತಿಶಾಲಿಯಾಗಿದ್ದರೆ ಮನಸ್ಸು ಪ್ರಸನ್ನವಾಗಿರುತ್ತದೆ, ನಿರ್ಧಾರ ಶಕ್ತಿ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಯಶಸ್ಸು ಸಿಗುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಈ ಶಕ್ತಿ ಅತ್ಯಂತ ತೀವ್ರವಾಗಿರುತ್ತದೆ. ಹಾಗಾಗಿ ಈ ಸಮಯವನ್ನು ಸದುಪಯೋಗ ಮಾಡಿಕೊಂಡರೆ ಅದೃಷ್ಟ ಖಂಡಿತ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಅದೃಷ್ಟ ಹೆಚ್ಚಿಸಲು ಚಂದ್ರಗ್ರಹಣದಲ್ಲಿ ಮಾಡಬೇಕಾದ ಕಾರ್ಯಗಳು

೧. ಧ್ಯಾನ ಮತ್ತು ಪ್ರಾರ್ಥನೆ ಚಂದ್ರಗ್ರಹಣದ ಸಮಯದಲ್ಲಿ ಶಾಂತವಾಗಿ ಕುಳಿತು ಧ್ಯಾನ ಮಾಡಿ. ನಿಮ್ಮ ಜೀವನದಲ್ಲಿ ಆಗಬೇಕಾದ ಒಳ್ಳೆಯ ಬದಲಾವಣೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ಧನಾತ್ಮಕ ಚಿಂತನೆಯೇ ಅದೃಷ್ಟದ ಮೊದಲ ಮೆಟ್ಟಿಲು.

೨. ಮಂತ್ರ ಜಪ ಮಹಾಮೃತ್ಯುಂಜಯ ಮಂತ್ರ ಅಥವಾ ಚಂದ್ರ ಮಂತ್ರವನ್ನು ಜಪಿಸಿ. ಓಂ ಸೋಂ ಸೋಮಾಯ ನಮಃ” ಎಂಬ ಚಂದ್ರ ಮಂತ್ರವನ್ನು ೧೦೮ ಬಾರಿ ಪಠಿಸುವುದರಿಂದ ಮನಸ್ಸಿನ ಶಾಂತಿ ಮತ್ತು ಅದೃಷ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

೩. ದಾನ ಮಾಡಿ ಚಂದ್ರಗ್ರಹಣದ ನಂತರ ಬಡವರಿಗೆ ಅನ್ನ, ಬಟ್ಟೆ ಅಥವಾ ಹಣ ದಾನ ಮಾಡಿ. ದಾನ ಮಾಡುವುದರಿಂದ ಪಾಪ ಕಳೆದು ಪುಣ್ಯ ಹೆಚ್ಚಾಗುತ್ತದೆ. ಪುಣ್ಯ ಹೆಚ್ಚಾದಂತೆ ಅದೃಷ್ಟವೂ ಹೆಚ್ಚಾಗುತ್ತದೆ.

೪. ಸ್ನಾನ ಮತ್ತು ಶುದ್ಧಿ ಗ್ರಹಣ ಮುಗಿದ ತಕ್ಷಣ ಸ್ನಾನ ಮಾಡಿ. ಇದು ಶರೀರ ಮತ್ತು ಮನಸ್ಸಿನ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕುತ್ತದೆ. ಶುದ್ಧ ಮನಸ್ಸಿನಿಂದ ಮಾಡುವ ಪ್ರಾರ್ಥನೆ ಹೆಚ್ಚು ಫಲ ನೀಡುತ್ತದೆ.

೫. ಹಸಿರು ತರಕಾರಿ ಮತ್ತು ತುಳಸಿ ತುಳಸಿ ಪೂಜೆ ಮಾಡುವುದು ಚಂದ್ರಗ್ರಹಣದ ಸಮಯದಲ್ಲಿ ವಿಶೇಷ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಚಂದ್ರನ ಅಶುಭ ಪ್ರಭಾವವನ್ನು ತಡೆಯುತ್ತದೆ ಎಂಬ ನಂಬಿಕೆ ಇದೆ.

Read more : – https://kapublic.com/subsidy-for-sheep-and-goat-farming-last-date-march-6/

Link ́:- https://www.digit.in/news/mobile-phones/upcoming-phone-launches-in-march-2026-apple-iphone-17e-xiaomi-17-series-nothing-phone-4a-series-and-more.html

 

Leave a Comment