Telegram Join My Telegram WhatsApp Join My WhatsApp

ಕುರಿ ಸಾಕಾಣಿಕೆಗೆ ಸಬ್ಸಿಡಿ ಬೇಕಾ? ಇಲ್ಲಿದೆ ನೋಡಿ!.

ಕುರಿ ಸಾಕಾಣಿಕೆಗೆ ಸಬ್ಸಿಡಿ ಬೇಕಾ? ಇಲ್ಲಿದೆ ನೋಡಿ!.

ಕುರಿ ಸಾಕಾಣಿಕೆ ಮಾಡ್ಬೇಕು ಆದ್ರೆ ದುಡ್ಡಿಲ್ಲ ಅಂತ ಯೋಚಿಸ್ತಾ ಇದೀರಾ? ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ 10+1 ಕುರಿ ಸಾಕಾಣಿಕೆಗೆ ಅಂತ ಸಬ್ಸಿಡಿ ಕೊಡೋಕೆ ಅರ್ಜಿಯನ್ನ ಆಹ್ವಾನಿಸಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ಕುರಿ ಅಥವಾ ಮೇಕೆ ಘಟಕಗಳನ್ನು ಸ್ಥಾಪನೆ ಮಾಡೋಕೆ ಆಸಕ್ತಿ ಇರೋರು ಸಹಾಯಧನಕ್ಕಾಗಿ ಅರ್ಜಿಯನ್ನ ಸಲ್ಲಿಸಬಹುದು. ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಸ್ವಾವಲಂಬನೆಯನ್ನ ಒದಗಿಸಬೇಕು ಅನ್ನೋ ಉದ್ದೇಶದಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಈ ಒಂದು ಯೋಜನೆಯನ್ನು ಹಮ್ಮಿಕೊಂಡಿದೆ.

ಕುರಿ ಸಾಕಾಣಿಕೆಗೆ ಅಂತ ಕೊಡುವ ಈ ಸಬ್ಸಿಡಿ ಮುಖ್ಯವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಗುಂಪಿನ ಜನರನ್ನ ಗಮನದಲ್ಲಿಟ್ಟುಕೊಂಡಿದೆ. ನಿಗಮವು ಕೊಡುವಂತಹ ಈ ಹಣದ ನೆರವು, ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರು ತಮ್ಮದೇ ಆಗಿರುವಂತಹ ಉದ್ಯಮಗಳನ್ನ ಆರಂಭ ಮಾಡೋಕೆ ಪ್ರೋತ್ಸಾಹ ಕೊಡುತ್ತದೆ. ನಿಗಮವು ಕೆಲವು ಅರ್ಹತೆಗಳನ್ನು ನಿಗದಿಪಡಿಸಿದೆ. ಅವುಗಳಿಗೆ ಅನುಗುಣವಾಗಿ ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು; ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು.

ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಅರ್ಜಿಯ ನಮೂನೆಗಳನ್ನ ಪಡೆದುಕೊಂಡು ಪರಿಶೀಲಿಸಬಹುದು. ಅರ್ಜಿಗಳನ್ನ ಅಗತ್ಯವಿರುವ ದಾಖಲೆಗಳನ್ನು ನೀಡಿ ನಿಗದಿತ ದಿನಾಂಕದೊಳಗೆ ಭರ್ತಿ ಮಾಡಬೇಕು.

ಯಾರು ಈ ಅರ್ಜಿಯನ್ನು ನೀಡಬಹುದು?

ಅರ್ಜಿದಾರರಿಗೆ ಕನಿಷ್ಠ 18 ವಯಸ್ಸಾಗಿರಬೇಕು ಮತ್ತು 60 ವರ್ಷಗಳ ಒಳಗೆ ಇರಬೇಕು.

ಅರ್ಜಿಯನ್ನು ಹಾಕಿರುವವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.

Sheep And Goat Farming Subsidy Amount-ಎಷ್ಟು ಸಹಾಯಧನ ಸಿಗೋದು?

ಈ ಯೋಜನೆಯಡಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗದವರಿಗೆ ಶೇಕಡಾ 90% ರಷ್ಟು ಸಹಾಯಧನ ನೀಡಲಾಗುತ್ತದೆ. ಅಂದರೆ, ಸುಮಾರು ರೂ. 63,000 ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 6, 2026

ಎಲ್ಲಿ ಅರ್ಜಿ ಸಲ್ಲಿಸಬೇಕು?

ನಿಗಮದ ಯೋಜನೆಯಡಿ ಸಹಾಯಧನವನ್ನು ಪಡೆಯಲು ನಿಮ್ಮ ಹತ್ತಿರದ ಕುರಿಗೆ ಸಂಬಂದಪಟ್ಟ ರೈತ ಉತ್ಪಾದಕ ಕಂಪನಿ ಕಚೇರಿ ಅಥವಾ ನಿಮ್ಮ ತಾಲ್ಲೂಕಿನ ಪಶುವೈದ್ಯಾಧಿಕಾರಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆಯನ್ನು ಮತ್ತು ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು.

Documents-ಅರ್ಜಿ ಸಲ್ಲಿಸಲು ಅವಕಶ್ಯಕ ದಾಖಲೆಗಳು:

ನಿಗಮದಿಂದ ಕುರಿ/ಮೇಕೆ ಸಾಕಾಣಿಕೆಗೆ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ್ ಪ್ರತಿ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ರೇಷನ್ ಕಾರ್ಡ್ (ಬಿಪಿಎಲ್ ಕಾರ್ಡ್).
  • ಬ್ಯಾಂಕ್ ಪಾಸ್ ಬುಕ್ ಪ್ರತಿ.

ಜಿಲ್ಲೆಯಲ್ಲಿ ಅರ್ಜಿ ಅಹ್ವಾನಿಸಲಾಗಿದೆ?

ಪ್ರಸ್ತುತ ತುಮಕೂರು ಸೇರಿದ ಹಾಗೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅನುದಾನ ಲಭ್ಯತೆಯ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಮ್ಮ ಜಿಲ್ಲೆಯಲ್ಲಿನ ಅರ್ಜಿ ಸಲ್ಲಿಸುವಿಕೆಯ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಪಶುಸಂಗೋಪನೆ ಇಲಾಖೆಯ ಕಚೇರಿಯನ್ನು ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಗಮದ ಅಧಿಕೃತ website ಪ್ರವೇಶ ಮಾಡಿ ಈ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಸಾದಕ-ಭಾದಕಗಳು 

ಸಾಧಕಗಳು (Pros):

ಕಡಿಮೆ ಬಂಡವಾಳ: ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದಾದ ಉಪಕಸುಬು.

ಹೆಚ್ಚಿನ ಬೇಡಿಕೆ: ಮಾಂಸ ಮತ್ತು ಉಣ್ಣೆಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇರುತ್ತದೆ.

ತ್ವರಿತ ಸಂತಾನೋತ್ಪತ್ತಿ: ಕುರಿ ಮತ್ತು ಮೇಕೆಗಳು ವೇಗವಾಗಿ ಮರಿ ಹಾಕುವುದರಿಂದ ಅಲ್ಪಾವಧಿಯಲ್ಲಿ ಸಂಖ್ಯೆ ವೃದ್ಧಿ ಆಗುತ್ತದೆ.

ಗೊಬ್ಬರದ ಲಾಭ: ಇವುಗಳ ಹಿಕ್ಕೆ ಅತ್ಯುತ್ತಮ ಸಾವಯವ ಗೊಬ್ಬರ, ಕೃಷಿ ಭೂಮಿಗೆ ಉಪಯುಕ್ತ.

ಬಾಧಕಗಳು (Cons):

ರೋಗಭಯ: ಪಿ.ಪಿ.ಆರ್ (PPR) ನಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ ಅಗತ್ಯ, ಸಕಾಲಕ್ಕೆ ಲಸಿಕೆ ಹಾಕಿಸುವುದು ಅನಿವಾರ್ಯ.

ಮೇವಿನ ಬಗ್ಗೆ ಗಮನ ಕೊಡಿ. ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆ ಎದುರಾಗಬಹುದು.

ನಿರ್ವಹಣೆ: ಕಾಡು ಪ್ರಾಣಿಗಳು ಅಥವಾ ಕಳ್ಳರ ಕಾಟದಿಂದ ರಕ್ಷಿಸಲು ಸುಸಜ್ಜಿತ ಕೊಟ್ಟಿಗೆ ಮತ್ತು ಭದ್ರತೆಯ ಅವಶ್ಯಕತೆ ಇರುತ್ತದೆ.

ನಿಗಮದ ದೂರವಾಣಿ ಸಂಖ್ಯೆ-080-22211268

ಕುರಿ ಮತ್ತು ಮೇಕೆ ಸಾಕಾಣಿಕೆ ಆರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ್ದು

ಕುರಿ ಮತ್ತು ಮೇಕೆ ಸಾಕಾಣಿಕೆ ಆರಂಭಿಸುವ ಮೊದಲು ಕೆಲವು ಮೂಲಭೂತ ವಿಷಯಗಳನ್ನು ತಿಳ್ಕೊಂಡಿರಬೇಕು. ಮೊದಲು ಯಾವ ತಳಿ ಆಯ್ಕೆ ಮಾಡಬೇಕು ಅನ್ನೋದನ್ನ decide ಮಾಡೋದು ಬಹಳ ಮಹತ್ವದ್ದು. ಕರ್ನಾಟಕದ ಹವಾಮಾನಕ್ಕೆ adjust ಆಗೋವಂತಹ ದೇಸಿ ತಳಿಗಳಾದ ದಕ್ಕನಿ, ನೆಲ್ಲೂರು ಮತ್ತು ಬಂಡೂರ್ ತಳಿ ಕುರಿಗಳು ಹೆಚ್ಚು ಸೂಕ್ತ. ಇವುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚು  ಮತ್ತು ಕಡಿಮೆ ಆರೈಕೆಯಲ್ಲಿ ಉತ್ತಮ ಇಳುವರಿ ನೀಡುತ್ತವೆ. ಸರ್ಕಾರದ ಸಬ್ಸಿಡಿ ಯೋಜನೆ ಬಳಸಿ 10 ಕುರಿ ಮತ್ತು 1 ಟಗರಿನಿಂದ ಘಟಕ ಆರಂಭ ಮಾಡಬಹುದು. ಮೊದಲ ವರ್ಷ ಅನುಭವ ಪಡೆದ ನಂತರ ಹಂತ ಹಂತವಾಗಿ ಸಂಖ್ಯೆ ಹೆಚ್ಚಿಸಿ ಆದಾಯ ಹೆಚ್ಚು ಮಾಡ್ಕೊಳ್ಳಬಹುದು. ಈ ಉದ್ಯಮ ಗ್ರಾಮೀಣ ಭಾಗದ ಕುಟುಂಬಗಳಿಗೆ ಸ್ಥಿರ ಆದಾಯದ ಮೂಲ ಒದಗಿಸುತ್ತದೆ ಅದೇ ಕಾರಣದಿಂದ ಅನೇಕ ಯಶಸ್ಸಿನ ಉದಾಹರಣೆಗಳಿವೆ.

ಕೊಟ್ಟಿಗೆ ನಿರ್ಮಾಣ ಮತ್ತು ಮೇವಿನ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು

ಕುರಿ ಸಾಕಾಣಿಕೆಯಲ್ಲಿ ಕೊಟ್ಟಿಗೆ ನಿರ್ಮಾಣ ಮತ್ತು ಮೇವಿನ ವ್ಯವಸ್ಥೆ ಹೆಚ್ಚು ಮಹತ್ವದ ಅಂಶ. ಸರಿಯಾಗಿರೋ ಗಾಳಿ ಮತ್ತು ಬೆಳಕು ಬರುವ ಸ್ಥಳದಲ್ಲಿ ಕೊಟ್ಟಿಗೆ ಇರಲಿ. ಪ್ರತಿ ಕುರಿಗೆ ಕನಿಷ್ಠ 10 ರಿಂದ 15 ಚದರ ಅಡಿ ಜಾಗ ಬೇಕಾಗುತ್ತೆ. ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಗಟ್ಟಿಮುಟ್ಟಾದ ಛಾವಣಿ ಇರಬೇಕು. ಕಾಡು ಪ್ರಾಣಿ ಮತ್ತು ಕಳ್ಳರ ಕಾಟ ತಪ್ಪಿಸಲು ಕೊಟ್ಟಿಗೆಗೆ ಸರಿಯಾದ ಬೇಲಿ ಮತ್ತು ಬಾಗಿಲು ಕಡ್ಡಾಯ. ಮೇವಿನ ವಿಷಯದಲ್ಲಿ ಹಸಿರು ಮೇವು ಬೆಳೆಸಲು ಸ್ವಲ್ಪ ಭೂಮಿ ಮೀಸಲಿಡಿ. ಅಗಸೆ, ಜೋಳದ ಸಿಳ್ಳೆ ಮತ್ತು ರಾಗಿ ಹುಲ್ಲು ಉತ್ತಮ ಮೇವು. ಬೇಸಿಗೆ ಕಾಲದಲ್ಲಿ ಮೇವಿನ ಕೊರತೆ ಎದುರಾಗಬಹುದು ಆದ್ದರಿಂದ ಮುಂಚಿತವಾಗಿ ಒಣ ಮೇವು ಸಂಗ್ರಹ ಮಾಡಿ ಇಡುವ ಅಭ್ಯಾಸ ಮಾಡಿಕೊಳ್ಳಿ. ಕುಡಿಯುವ ನೀರಿನ ವ್ಯವಸ್ಥೆ ಸದಾ ಶುದ್ಧ ಮತ್ತು ಸ್ವಚ್ಛವಾಗಿ ಇರಿಸಿ. ಇವೆಲ್ಲ ಸರಿಯಾಗಿ ಮಾಡಿದರೆ ಕುರಿಗಳ ಆರೋಗ್ಯ ಮತ್ತು ಬೆಳವಣಿಗೆ ಉತ್ತಮವಾಗಿರುತ್ತೆ.

ಪಶುವೈದ್ಯರ ಸಲಹೆ ಬೇಕಾಗುತ್ತಾ?

ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಅತಿ ದೊಡ್ಡ ಸವಾಲು ಎಂದರೆ ರೋಗ ನಿಯಂತ್ರಣ. PPR ಎಂಬ ಸಾಂಕ್ರಾಮಿಕ ರೋಗ ಕುರಿಗಳಿಗೆ ಬಹಳ ಅಪಾಯಕಾರಿ. ಇದನ್ನು ತಡೆಗಟ್ಟಲು ಸಕಾಲದಲ್ಲಿ ಲಸಿಕೆ ಹಾಕಿಸುವುದು ಅನಿವಾರ್ಯ. ಜೊತೆಗೆ ಕಾಲು ಮತ್ತು ಬಾಯಿ ರೋಗ, ಸಿಡುಬು ಮತ್ತು ಉಣ್ಣೆ ಹುಳ ಸಮಸ್ಯೆಗಳು ಸಾಮಾನ್ಯ. ತಾಲ್ಲೂಕು ಪಶುವೈದ್ಯಾಧಿಕಾರಿ ಕಚೇರಿಯಿಂದ ಉಚಿತ ಲಸಿಕೆ ಮತ್ತು ಔಷಧಿ ಲಭ್ಯ. ಪ್ರತಿ ಮೂರು ತಿಂಗಳಿಗೊಮ್ಮೆ ಪಶುವೈದ್ಯರ ತಪಾಸಣೆ ಮಾಡಿಸಿ. ಹೊಸ ಕುರಿ ಖರೀದಿಸಿ ತಂದಾಗ ಕನಿಷ್ಠ 15 ದಿನ ಪ್ರತ್ಯೇಕ ಇರಿಸಿ ನಂತರ ಇತರ ಕುರಿಗಳ ಜೊತೆ ಸೇರಿಸಿ. ಕೊಟ್ಟಿಗೆ ನಿಯಮಿತವಾಗಿ ಸ್ವಚ್ಛ ಮಾಡಿ ಸೋಂಕು ನಾಶಕ ಸಿಂಪಡಿಸಿ. ರೋಗ ತಡೆಗಟ್ಟುವುದು ಚಿಕಿತ್ಸೆಗಿಂತ ಸುಲಭ ಮತ್ತು ಅಗ್ಗ ಎಂಬ ಮೂಲ ತತ್ವ ನೆನಪಿಡಿ.

ಮಾರಾಟ ಮತ್ತು ಆದಾಯ ಹೆಚ್ಚಿಸಿಕೊಳ್ಳೋಕೆ

ಕುರಿ ಸಾಕಾಣಿಕೆ ಮಾಡಿದ ನಂತರ ಮಾರಾಟ ಮಾಡಲು ಸರಿಯಾದ ಮಾರ್ಗ ತಿಳಿದಿರಬೇಕು. ಸ್ಥಳೀಯ ವಾರದ ಸಂತೆ ಮತ್ತು ಮಾಂಸ ಮಾರಾಟಗಾರರಿಗೆ ನೇರ ಮಾರಾಟ ಮಾಡಬಹುದು. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಿರುತ್ತೆ. ಬಕ್ರೀದ್, ದೀಪಾವಳಿ ಮತ್ತು ಸಂಕ್ರಾಂತಿ ಹಬ್ಬಗಳ ಸಮಯದಲ್ಲಿ ಉತ್ತಮ ಬೆಲೆ ಸಿಗುತ್ತದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ರೈತ ಉತ್ಪಾದಕ ಕಂಪನಿ ಮೂಲಕ ಸಂಘದಿಂದ ಮಾರಾಟ ಮಾಡಬಹುದು. ಡಿಜಿಟಲ್ ಮಾರ್ಗದಲ್ಲಿ ವಾಟ್ಸಾಪ್ ಮತ್ತು ಸ್ಥಳೀಯ ಗ್ರೂಪ್ ಮೂಲಕ ಗ್ರಾಹಕರನ್ನು ತಲುಪಬಹುದು. ಉಣ್ಣೆ ಮಾರಾಟ ಮಾಡುವುದರಿಂದ ಹೆಚ್ಚುವರಿ ಆದಾಯ ಸಿಗುತ್ತೆ. ಗೊಬ್ಬರ ಮಾರಾಟ ಮಾಡಿ ಕೂಡ ಆದಾಯ ಗಳಿಸಬಹುದು. ಹೀಗೆ ಒಂದೇ ಉದ್ಯಮದಿಂದ ಹಲವು ಮೂಲಗಳ ಆದಾಯ ಪಡೆಯಬಹುದು ಎಂಬುದು ಈ ಉದ್ಯಮದ ಅತಿ ದೊಡ್ಡ ವಿಶೇಷ.

Read more : – https://kapublic.com/bombay-19-posts-recruitment-march-16-last-date/

Link : – https://www.apple.com/in/iphone/

Leave a Comment