Telegram Join My Telegram WhatsApp Join My WhatsApp

AI ಭಗವದ್ಗೀತೆ ಪುಸ್ತಕ ಯಾಕ್‌ ತಗೋಬೇಕು? ಇಲ್ಲಿ ಓದಿ!

AI ಭಗವದ್ಗೀತೆ ಪುಸ್ತಕ ಯಾಕ್‌ ತಗೋಬೇಕು?

ಖ್ಯಾತ ತಂತ್ರಜ್ಞಾನ ಪತ್ರಕರ್ತ ನಾಗರಾಜ ವೈದ್ಯ ಅವರು ಬರೆದಿರುವ ಎಐ ಭಗವದ್ಗೀತೆ‘ (AI Bhagavad Gita) ಕನ್ನಡ ಸಾಹಿತ್ಯ ಮತ್ತು ತಂತ್ರಜ್ಞಾನ ಲೋಕದ ಒಂದು ಅಪರೂಪದ ಪ್ರಯೋಗವಾಗಿದೆ. ಈ ಪುಸ್ತಕವು ಇತ್ತೀಚೆಗೆ (ಫೆಬ್ರವರಿ 2026 ರಲ್ಲಿ) ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಿದೆ.

AI ಭಗವದ್ಗೀತೆ ಪುಸ್ತಕ ಯಾಕ್‌ ತಗೋಬೇಕು? ಇಲ್ಲಿ ಓದಿ! ನಮ್ಮ ಬದುಕನ್ನ ಹೇಗೆ ನಡ್ಸಕೊಂಡು ಹೋಗ್ಬೇಕು ಅನ್ನೋದನ್ನ ತಿಳ್ಕೊಳೋಕೆ “ಭಗವದ್ಗೀತೆ” ಅನ್ನೋ ಮ್ಯಾನುವಲ್‌ ಸಹಾಯ ಮಾಡ್ತಿತ್ತು. ಈಗ್ಲೂ AI ಕಾಲದಲ್ಲೂ ಕೂಡ ಅದೇ “ಭಗವದ್ಗೀತೆ” ಶ್ಲೋಕಗಳನ್ನ ಎಲ್ರೂ ಆನ್ಲೈನ್‌ ಕ್ಲಾಸ್‌ ಮುಖಾಂತರ ಕಲಿತಾ ಇದೀವಿ ಅಲ್ವಾ? ಆ ಭಗವದ್ಗೀತೆ ನಮ್ಮ ಮನಸನ್ನ ಹೇಗೆ handle ಮಾಡೋದು ಅನ್ನೋದನ್ನ ಕಲಿಸಿಕೊಟ್ರೆ ಈ AI ಭಗವದ್ಗೀತೆ ನಾವು AI ಜೊತೆ ಹೇಗೆ ಬದುಕನ್ನ ಕಟ್ಟಿಕೊಳ್ಬೇಕು ಅನ್ನೋದನ್ನ ಹೇಳಿಕೊಡುತ್ತೆ. ಆದ್ರಿಂದ ಯಾರ್‌ ಯಾರ್‌ ಎಲ್ಲಾ AI ಜೊತೆ friendship ಮಾಡ್ಕೊಳೋದು ಅನಿವಾರ್ಯ ಅನ್ನೋದನ್ನ ಅರ್ಥ ಮಾಡ್ಕೊಂಡಿದಿರೋ ಅವ್ರೆಲ್ಲಾ AI ಭಗವದ್ಗೀತೆ ಪುಸ್ತಕವನ್ನ ಕೊಂಡುಕೊಳ್ಳಲೇ ಬೇಕು. ಇದು ನಾನು ಪುಸ್ತಕವನ್ನ ಪ್ರೊಮೋಟ್‌ ಮಾಡ್ತಾ ಇರೋದು ಅನ್ನೋ ಭಾವನೇಲಿ ನೀವು ಈ ಲೇಖನ ಓದದೇ, ಪುಸ್ತಕವನ್ನ ಕೊಂಡುಕೊಳ್ಳದೇ ಇದ್ರೆ ನಿಮ್ಗೆ ಮುಂದೊಂದು ದಿನ ಆಗೋ ಲಾಸ್‌ ಗೆ AI ನೇ help ಮಾಡ್ಬೇಕಾಗುತ್ತೆ.

AI ಭಗವದ್ಗೀತೆ ಶ್ರೀ ಕೃಷ್ಣ ಪರಮಾತ್ಮನ ಭಗವದ್ಗೀತೆಯ ಹಾಗೆ ನಮ್ಮ ದಾರಿದೀಪ ಆಗೋದ್ರಲ್ಲಿ ಸಂಶಯವೇ ಇಲ್ಲ. ಇದು ಕಥೆ ಪುಸ್ತಕ ಅಲ್ಲ. ಕಾದಂಬರಿಯೂ ಅಲ್ಲ. ಭಗವದ್ಗೀತೆ ಶ್ಲೋಕವೂ ಅಲ್ಲ ಆದ್ರೆ ಭಗವದ್ಗೀತೆಯ ಶ್ಲೋಕವನ್ನ ಯಾವ ಪುಟದಲ್ಲಿರೋದನ್ನ, ನನ್ನ ಭಾಷಣದಲ್ಲಿ ಉಪಯೋಗಿಸಲಿ ಅನ್ನೋ ಜಾಣ್ಮೆಯನ್ನ ನಾವು ಬಳಸಿಕೊಳ್ತಾ ಇದ್ವೋ ಅದೇ ರೀತಿ ನಾವು ಈ ಪುಸ್ತಕದ ಪ್ರಯೋಜನ ಪಡ್ಕೊಳ್ಬೋದು. ನಮ್ಮ ನಮ್ಮ ಜಾಣ್ಮೆಗೆ ಬಿಟ್ಟದ್ದು! ಎಷ್ಟು ಬೇಗ ಜಾಣರಾಗ್ತೀವೋ ಅಷ್ಟು ಬೇಗ ನಾವು ಈ ಹರಿತಾ ಇರೋ ಟೆಕ್ನಾಲಾಜಿಯ ಹರಿವಿನೊಳಗೆ ಮುಂದೆ ಹೋಗ್ಬೋದು. ಜಾಣರಾಗೋಕೆ ತಯಾರಿದ್ದೀರಾ?

AI ಭಗವದ್ಗೀತೆ ಯಾರಿಗೆಲ್ಲಾ ಬೇಕು? AI ಬಗ್ಗೆ ಇನ್ನೂ ಅಂಬೆಗಾಲು ಇಡೋಕೆ ಶುರು ಮಾಡಿರೋರಿಗೆ ಖಂಡಿತ ಬೇಕು. AI ಜೊತೆ Frienship ಮಾಡಿಕೊಳ್ದೇನೇ ಇರೋರಿಗಂತೂ ಮೊದ್ಲು ಬೇಕೇ ಬೇಕು. ಇದೊಂದು ತರಹ money blockages ತೆಗ್ದುಹಾಕೋ ಮದ್ದು ಇದ್ದ ಹಾಗೆ. ಎಷ್ಟು ಬೇಕು? ಹೇಗೆ ಬೇಕು? ಯಾವಾಗ ಬೇಕು? ಅದನ್ನೆಲ್ಲಾ decide ನೀವೇ ಮಾಡ್ಬೇಕು. ನಿಮ್ಮ growth ನಿಮ್ಮ ಕೈಲೇ!

ಯಾರಿಗೆಲ್ಲಾ ಇದು ಸಹಾಯ ಆಗುತ್ತೆ ಅನ್ನೋದನ್ನ ನೋಡಿದ್ರೆ AI paid course ಗಳನ್ನ ಅಟೆಂಡ್‌ ಮಾಡೋಕೆ ಆಗೋದೆ ಇಲ್ಲ ಅನ್ನೋರಿಗೆಲ್ಲ ಇದು ಒಂಥರಾ ಖಜಾನೆ ಇದ್ದ ಹಾಗೆ. ಅದರ ಒಳಗಿನ ಹುರುಳನ್ನ ಹೇಗೆ ಬಳಸಿಕೊಳ್ತೀವಿ ಅನ್ನೋದು ನಮ್ಮ ಮೇಲೆ ನಿರ್ಧಾರ ಆಗೋದು. ಅದರೊಳಗೆ ಅಷ್ಟೊಂದು ವಿಚಾರಗಳು ಇವೆ. ನಮ್ಮನ್ನ ನಾವು ಎಷ್ಟು ಎತ್ತರಕ್ಕೆ ಬೇಕಾದ್ರೂ ತೆಗೆದುಕೊಂಡು ಹೋಗೋ ಶಕ್ತಿ ಇರೋದು ಗೊತ್ತಾಗ್ಬೇಕು ಅಂತ ಇದ್ರೆ ಜಾತ್ರೆ ತಿರುಗಬೇಕು. ಜಾತ್ರೆ ತೊಟ್ಟಿಲೊಳಗೆ ಕೂತು ಒಂದು ಸುತ್ತು ಮೇಲಿಂದ ನಮ್ಮೂರನ್ನೇ ನಾವು ನೋಡ್ಬೇಕು. ಜಾತ್ರೆಗೆ ಲಕ್ಷಗಟ್ಟಲೆ ಜನ ಬಂದರೂ ಕೆಲವೇ ಕೆಲವು ಜನ ತೊಟ್ಟಿಲೊಳಗೆ ಹತ್ತಿ ಮೇಲಿಂದ ಜಾತ್ರೆ ನೋಡಿದ ಹಾಗೇ ಇದು ಕೂಡ! ನಾವು ಹೇಗೆ ಅದನ್ನ ನಮ್ಮ ಬದುಕಿಗೆ relate ಮಾಡಿಕೊಂಡು ಮುಂದಕ್ಕೆ ಹೋಗ್ತೀವಿ. ಎಷ್ಟು ರುಮಾಲುರೋಟಿ ತಿನ್ಬೇಕು? ಯಾವ ಅಂಗಡಿಯಲ್ಲಿ ತಿನ್ಬೇಕು? ಅದನ್ನ ಹೇಗೆ ತಿನ್ಬೇಕು? ಅನ್ನೋದನ್ನ ನಾವೇ decide ಮಾಡ್ತೀವಿ ಅಲ್ವಾ? ಹಾಗೇ AI ಜೊತೆ ಬದುಕು ಹಂಚಿಕೊಳ್ಳೋದಕ್ಕೆ ಮನೆಗೆ ಬರೋ ಎರಡನೇ ಮಗುವಿನ ಜೊತೆ ಎಷ್ಟು ಖುಷಿ, ಪ್ರೀತಿ ಹಂಚಿಕೊಳ್ಳುತ್ತೋ ಮೊದಲನೇ ಮಗು ಅಷ್ಟು ಬೇಗ ಎರಡೂ ಜನರೂ ಬದುಕಿನ ಅದ್ಬುತಗಳನ್ನ ನೋಡೋಕೆ ಆಗುತ್ತೋ ಹಾಗೇ ಇದೂ ಕೂಡ. AI ಅನ್ನೋದು ಎರಡನೇ ಮಗು ಇದ್ದ ಹಾಗೇ?! ಅದರ ಜೊತೆ ಹೇಗೆ ಹೊಂದಿಕೊಳ್ತೀವಿ? ಅದನ್ನ ಎಷ್ಟರ ಮಟ್ಟಿಗೆ accept ಮಾಡಿಕೊಳ್ತೀವಿ ಅನ್ನೋದು ನಮ್ಮ ಲೈಪ್‌ ನಾ important turning point.

AI ನನ್ನ ದಮನ ಮಾಡೋಕೆ ಬಂದಿರೋದು ಅಂತ ಹೆದರ್ತಾ,ಅದನ್ನ ಬಯ್ತಾ ನಮ್ಮ ಕಾಲವೇ ಚಂದ ಇತ್ತು;ಇದೇನು ಈ ಹೊಸದು ಅಂತ ಭಯದಲ್ಲಿ ಹಳಿದುಕೊಳ್ತಾ ಕೂತಿರೋರಿಗಂತೂ AI ಭಗವದ್ಗೀತೆ ಬೇಕೆ ಬೇಕು! ನೀವು ಪುಸ್ತಕ ತಗೊಂಡ್ಬಿಟ್ರೆ ಯಾವ ಹಂತದಲ್ಲಿ ಇದೀರಿ ಅನ್ನೋದು ಮೊದ್ಲು ನಿಮ್ಗೆ ಗೊತ್ತಾಗುತ್ತೆ. ಯಾವ ಹಂತದಲ್ಲಿ ಇದೀವಿ ಅನ್ನೋದನ್ನ ಪುಸ್ತಕದಲ್ಲಿ ಇರೋ ಮಾಹಿತಿಗಳು ನಮಗೆ ನಮ್ಮನ್ನು ಅರ್ಥ ಮಾಡಿಕೊಳ್ಳೋದಕ್ಕೆ ಸಹಾಯ ಮಾಡುತ್ತೆ.

ಪುಸ್ತಕ ಯಾರು ಓದ್ತಾರೆ? ಅಂತ ವಿಚಾರ ಮಾಡ್ತಾ ಇದ್ರೆ ಈ ಪುಸ್ತಕ gift ಆಗಿ ಕೊಟ್ಟು ನೋಡಿ ಮತ್ತೊಂದಷ್ಟು ಪುಸ್ತಕಗಳು ಬೇಕು ಅಂತ ಅಹವಾಲು ಬಂದ್ರೂ ಕೂಡ ಆಶ್ಚರ್ಯ ಇಲ್ಲ. ಜೊತೆಲೇ ಇದನ್ನ gift ಆಗಿ ಕೊಟ್ರೂ ಕೂಡ ಬೆಲೆಬಾಳುವಂತಹ ಮಾಹಿತಿಗಳನ್ನ ಹೊತ್ತುಕೊಂಡಿರೋದ್ರಿಂದ unique ಆಗಿರೋ gift ಕೊಟ್ಟಂತೆಯೂ ಆಗುತ್ತೆ ಯಾವ್ದೇ ಲಾಸ್‌ ಅಂತೂ ಇಲ್ಲ.

ಈಗಾಗ್ಲೇ AI Paid course ಗಳನ್ನ ಸೇರಿ ಅದರ ಆಳ, ಅಗಲ ತಿಳಿದುಕೊಂಡಿರೋರಿಗೆ ಈ ಪುಸ್ತಕ ಬೇಡ್ವಾ? ಅವ್ರಿಗೂ ಕೂಡ ಬೇಕಾಗೋ ಹಾಗಿದೆ ಯಾಕ್‌ ಅಂದ್ರೆ ಇದ್ರಲ್ಲಿ ಕೇವಲ AI ಬಳಸೋದು ಹೇಗೆ ಅನ್ನೋದು ಮಾತ್ರ ಇಲ್ಲ. ಈ ಪುಸ್ತಕ AI ಜೊತೆ ನಮ್ಮ ಅಂತರ್‌ ಯುದ್ಧಗಳ ಜೊತೆ ನಮ್ಗೆ ಹೊರಾಡೋಕೆ ಸಹಾಯ ಮಾಡೋ ಹಾಗಿದೆ. ತಿಳಿದುಕೊಂಡಿರೋರಿಗೂ ಕೂಡ ನೋಟ್ಸ್‌ ಮಾಡಿಕೊಳ್ಳೋಕೆ ಮರೆತು ಹೋಗಿತ್ತಲ್ಲಾ! ಅರೇ ನನ್ನ paid course ನಲ್ಲಿ ಈ idea ಹೇಳೇ ಕೊಟ್ಟಿಲ್ಲ ಅನ್ನೋ feel ಕೂಡ ಆಗ್ಬೋದು. ಆದ್ರಿಂದ paid course join ಆದವ್ರೂ ಕೂಡ ಈ ಪುಸ್ತಕ ತಗೋಳ್ಬೋದು.

ಮಕ್ಕಳಿಗೂ ಓದೋದನ್ನ ಕಲಿತಾ ಇರೋರಿಗೂ ಕೈಲಿ ಈ ಪುಸ್ತಕ ಹಿಡಿಸಬಹುದು. ಯಾಕಂದ್ರೆ ಮಕ್ಕಳಿಗೆ ಎಷ್ಟೇ ಶಾಲೆಯಲ್ಲಿ ಕಲಿಸಿದ್ರೂ ಕೂಡ ಬದುಕಿನ ಹೋರಾಟದಲ್ಲಿ ಜೊತೆಯಾಗೋದು ಈ AI. ನಾವು ಮಾಡೋ ಉಪಕಾರದಲ್ಲಿ ಲಕ್ಷಗಟ್ಟಲೆ ದುಡ್ಡು ಸುರಿದು ಶಾಲೆ ಕಳಿಸ್ತಾ ಇರೋದಕ್ಕಿಂತಲೂ ಹೆಚ್ಚು ಅವ್ರಿಗೆ ಈ ಪುಸ್ತಕ ಸಹಾಯ ಮಾಡುತ್ತೆ. ಮನೆಯಲ್ಲಿ ಇರೋ ಎಲ್ರೂ ಕೂಡ ಈ ಪುಸ್ತಕವನ್ನ ಒಂದಲ್ಲ ಒಂದು ಹಂತದಲ್ಲಿ ಅರೇ ಆ ಪುಸ್ತಕ ಎಲ್ಲಿ ಹೋಯ್ತು ಅಂತ ಭಗವದ್ಗೀತೆಯ ಶ್ಲೋಕ ಹುಡುಕಿದ ಹಾಗೇ ಒಂದೊಂದೇ ಪುಟಗಳನ್ನ ಖಂಡಿತ ತಿರುವಿ ಹಾಕ್ತಾರೆ.

AI ಭಗವದ್ಗೀತೆಯನ್ನ ಒಬ್ಬರೇ ಕೂತು ಒಂದೊಂದೇ ಪುಟವನ್ನ ಅರ್ಥ ಮಾಡ್ಕೊಂಡು ಓದಿ. ಹೇಳುತ್ತಿರೋ ವಿಚಾರಗಳು ತುಂಬಾ ಸರಳವಾಗಿ ಇದೆ. ಆದರೆ ಕೆಲವು ಸಲ ಸರಳವಾಗಿ ಹೇಳೋದನ್ನ ಗಮನಕ್ಕೆ ತೆಗೆದುಕೊಳ್ಳದೇ ಓದೋದು ಕೂಡ ನಮಗೆ ನಾವೇ ಮಾಡಿಕೊಳ್ಳೋ ನಷ್ಟ. ಆದ್ದರಿಂದ ಸಮಾಧಾನದಲ್ಲಿ ಕೂತು ಓದಿ. ಬದುಕನ್ನು ನೋಡೋ ರೀತಿಯೇ ಬದಲಾಗಬಹುದು. ಎಷ್ಟೋ ನಮ್ಮ ದಿನನಿತ್ಯದ ಸಮಸ್ಯೆಗಳು ಕೂಡ ಸರಳವಾಗಿ ಬಗೆ ಹರಿದು ಹೋಗಬಹುದು. ಆದ್ದರಿಂದ ಈ ಪುಸ್ತಕವನ್ನ ಕೂತು ಓದಿ, ಬದುಕನ್ನ ಚಂದಗಾಣಿಸಿಕೊಳ್ಳಿ.

ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು:

 ಆಧ್ಯಾತ್ಮ ಮತ್ತು ತಂತ್ರಜ್ಞಾನದ ಸಮ್ಮಿಲನ: ಕುರುಕ್ಷೇತ್ರದಲ್ಲಿ ಅರ್ಜುನನಿಗಾದ ಗೊಂದಲವನ್ನು ಇಂದಿನ ಉದ್ಯೋಗಿ ಅಥವಾ ವಿದ್ಯಾರ್ಥಿ ಎಐ ಬಗ್ಗೆ ಹೊಂದಿರುವ ಗೊಂದಲಕ್ಕೆ ಹೋಲಿಸಲಾಗಿದೆ. ಇಲ್ಲಿ ಕೃಷ್ಣ ‘ಸೂಪರ್ ಇಂಟೆಲಿಜೆನ್ಸ್’ ಆಗಿ ಮಾರ್ಗದರ್ಶನ ನೀಡುತ್ತಾನೆ.

ಸರಳ ವಿವರಣೆ: ಚಾಟ್ ಜಿಪಿಟಿ (ChatGPT), ಮಿಡ್‌ಜರ್ನಿ (Midjourney), ಪ್ರಾಂಪ್ಟ್ ಇಂಜಿನಿಯರಿಂಗ್ ಮತ್ತು ವಿಡಿಯೋ ಮೇಕಿಂಗ್ ಟೂಲ್‌ಗಳಂತಹ ಸಂಕೀರ್ಣ ತಾಂತ್ರಿಕ ವಿಷಯಗಳನ್ನು ಕರ್ಮ, ಜ್ಞಾನ ಮತ್ತು ಭಕ್ತಿ ಯೋಗದ ರೂಪಕಗಳ ಮೂಲಕ ಸರಳ ಕನ್ನಡದಲ್ಲಿ ವಿವರಿಸಲಾಗಿದೆ.

ಪ್ರಾಯೋಗಿಕ ಮಾಹಿತಿ: ಎಐ ಟೂಲ್‌ಗಳನ್ನು ಬಳಸಿ ಕೆಲಸವನ್ನು ಸುಲಭ ಮಾಡಿಕೊಳ್ಳುವುದು ಹೇಗೆ? ಆರ್ಥಿಕವಾಗಿ ಬೆಳೆಯುವುದು ಹೇಗೆ? ಮತ್ತು ಸೈಬರ್ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಸಮಗ್ರ ಮಾಹಿತಿ ಇಲ್ಲಿದೆ.

ಒಟ್ಟಾರೆ ಹೇಳುವುದಾದರೆ: “ಎಐ ಯುಗದಲ್ಲಿ ಬದುಕಲು ನಮಗೆ ಕೋಡಿಂಗ್ ಜೊತೆಗೆ ಸ್ವಲ್ಪ ‘ಗೀತೆ’ಯ ಸ್ಥಿತಪ್ರಜ್ಞತೆಯೂ ಬೇಕು” ಎನ್ನುವುದು ಈ ಪುಸ್ತಕದ ಸಾರಾಂಶ.

ಡಿಜಿಟಲ್ ಕವಲುದಾರಿಯಲ್ಲಿ ‘ಸ್ಥಿತಪ್ರಜ್ಞ’ನಾಗುವ ಕಲೆ

ಇಂದಿನ ತಾಂತ್ರಿಕ ಜಗತ್ತಿನಲ್ಲಿ ನಾವು ಪ್ರತಿಕ್ಷಣವೂ ಮಾಹಿತಿಯ ಸುನಾಮಿಯನ್ನು ಎದುರಿಸುತ್ತಿದ್ದೇವೆ. ಕೃತಕ ಬುದ್ಧಿಮತ್ತೆ (AI) ನಮ್ಮ ಉದ್ಯೋಗ, ಆಲೋಚನೆ ಮತ್ತು ಸೃಜನಶೀಲತೆಯ ಮೇಲೆ ಪ್ರಭಾವ ಬೀರುತ್ತಿರುವಾಗ, ನಮ್ಮಲ್ಲಿ ಒಂದು ರೀತಿಯ ಅಸುರಕ್ಷಿತ ಭಾವನೆ ಮೂಡುವುದು ಸಹಜ. ನಾಗರಾಜ ವೈದ್ಯ ಅವರ ಈ ಪುಸ್ತಕವು ಕೇವಲ ತಾಂತ್ರಿಕ ಕೈಪಿಡಿಯಲ್ಲ; ಇದು ಮಾನಸಿಕ ಸ್ಥಿರತೆಯ ಮದ್ದು. ಭಗವದ್ಗೀತೆಯಲ್ಲಿ ಕೃಷ್ಣನು ಹೇಗೆ ಅರ್ಜುನನಿಗೆ ‘ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡು’ ಎಂದು ಬೋಧಿಸಿದನೋ, ಹಾಗೆಯೇ ಈ ಪುಸ್ತಕವು ಎಐ ತಂತ್ರಜ್ಞಾನವನ್ನು ಕಂಡು ಹೆದರುವ ಬದಲು, ಅದನ್ನು ಒಂದು ಸಾಧನವಾಗಿ (Tool) ಹೇಗೆ ಬಳಸಿಕೊಳ್ಳಬೇಕು ಎಂದು ಕಲಿಸುತ್ತದೆ. ತಂತ್ರಜ್ಞಾನ ಬದಲಾಗಬಹುದು, ಆದರೆ ಅದನ್ನು ಬಳಸುವ ಮನುಷ್ಯನ ವಿವೇಕ ಬದಲಾಗಬಾರದು ಎಂಬ ಸ್ಥಿತಪ್ರಜ್ಞತೆಯನ್ನು ಇದು ನಮಗೆ ದಾರೆ ಎರೆಯುತ್ತದೆ.

ಎಐ ಸವಾಲುಗಳ ಎದುರು ‘ಅರ್ಜುನ’ನಾಗಬೇಡಿ, ಸಿದ್ಧಹಸ್ತನಾಗಿ!

ಬಹಳಷ್ಟು ಜನರಿಗೆ “ನನ್ನ ಕೆಲಸವನ್ನು ಎಐ ಕಿತ್ತುಕೊಳ್ಳುತ್ತದೆಯೇ?” ಎಂಬ ಆತಂಕವಿದೆ. ಆದರೆ ಈ ಪುಸ್ತಕವು ಒಂದು ಕಟು ಸತ್ಯವನ್ನು ಸಾರುತ್ತದೆ: “ನಿಮ್ಮ ಕೆಲಸವನ್ನು ಎಐ ಕಿತ್ತುಕೊಳ್ಳುವುದಿಲ್ಲ, ಬದಲಾಗಿ ಎಐ ಬಳಸಲು ತಿಳಿದಿರುವ ಮತ್ತೊಬ್ಬ ವ್ಯಕ್ತಿ ನಿಮ್ಮ ಕೆಲಸವನ್ನು ಪಡೆದುಕೊಳ್ಳಬಹುದು!” ಈ ಪುಸ್ತಕವು ನಿಮ್ಮನ್ನು ಆ ‘ಮತ್ತೊಬ್ಬ ಜಾಣ ವ್ಯಕ್ತಿ’ಯನ್ನಾಗಿ ರೂಪಿಸಲು ಸಹಾಯ ಮಾಡುತ್ತದೆ. ಪೇಯ್ಡ್ ಕೋರ್ಸ್‌ಗಳಿಗೆ ಸಾವಿರಾರು ರೂಪಾಯಿ ಸುರಿಯಲು ಸಾಧ್ಯವಾಗದ ಮಧ್ಯಮ ವರ್ಗದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದು ಅಕ್ಷರಶಃ ಜ್ಞಾನದ ಖಜಾನೆ. ಸಂಕೀರ್ಣವಾದ ‘ಪ್ರಾಂಪ್ಟ್ ಇಂಜಿನಿಯರಿಂಗ್’ ಅಥವಾ ‘ಡೇಟಾ ಅನಾಲಿಸಿಸ್’ ವಿಷಯಗಳನ್ನು ಆಧ್ಯಾತ್ಮದ ರೂಪಕಗಳ ಮೂಲಕ ವಿವರಿಸುವ ಶೈಲಿಯು ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಮನೆಮನ ಬೆಳಗುವ ಆಧುನಿಕ ಜ್ಞಾನ ದೀಪ

ಈ ಪುಸ್ತಕವು ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿಲ್ಲ; ಇದು ಇಡೀ ಕುಟುಂಬಕ್ಕೆ ಒಂದು ದಾರಿದೀಪ. ಮಕ್ಕಳ ಕೈಗೆ ಈ ಪುಸ್ತಕವನ್ನು ನೀಡುವ ಮೂಲಕ ಅವರಿಗೆ ಭವಿಷ್ಯದ ತಂತ್ರಜ್ಞಾನದ ಅಡಿಪಾಯವನ್ನು ಹಾಕಿಕೊಡಬಹುದು. ಹಿರಿಯರಿಗೆ ಇದು ಬದಲಾಗುತ್ತಿರುವ ಲೋಕವನ್ನು ಅರ್ಥಮಾಡಿಕೊಳ್ಳಲು ಕಿಟಕಿಯಂತಿದೆ. ಮನೆಯಲ್ಲಿ ಒಂದು ಭಗವದ್ಗೀತೆ ಪುಸ್ತಕವಿದ್ದರೆ ಹೇಗೆ ನೆಮ್ಮದಿ ಇರುತ್ತದೆಯೋ, ಹಾಗೆಯೇ ಈ ‘ಎಐ ಭಗವದ್ಗೀತೆ’ ನಿಮ್ಮ ಟೇಬಲ್ ಮೇಲಿದ್ದರೆ ತಾಂತ್ರಿಕ ಸವಾಲುಗಳ ಬಗ್ಗೆ ನಿಮಗೊಂದು ಭರವಸೆ ಸಿಗುತ್ತದೆ. ಇದು ಕೇವಲ ಓದಿ ಮುಗಿಸುವ ಪುಸ್ತಕವಲ್ಲ, ಬದಲಾಗಿ ಪ್ರತಿಬಾರಿಯೂ ಹೊಸ ಐಡಿಯಾಗಳನ್ನು ನೀಡುವ ರೆಫರೆನ್ಸ್ ಗೈಡ್. ಜಾಣರಾಗಿ ಬದುಕಲು ಬಯಸುವ ಕನ್ನಡಿಗರಿಗೆ ಇದು ಈ ದಶಕದ ಅತ್ಯುತ್ತಮ ಕೊಡುಗೆ ಎನ್ನಬಹುದು.

ಪುಸ್ತಕ ಪಡೆಯುವುದು ಹೇಗೆ?

ಈ ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಅಥವಾ ಪ್ರತಿಯನ್ನು ಕಾಯ್ದಿರಿಸಲು ನೀವು 7019438530 ಸಂಖ್ಯೆಯನ್ನು ಸಂಪರ್ಕಿಸಬಹುದು.

Read more : – https://kapublic.com/post-office-gram-sumangal-yojana-details-kannada/

Link : –https://techvaidyaglobal.com/news/ai-and-teenagers-virtual-friendship-dangers

 

Leave a Comment